Posts

Showing posts from March, 2023

ಆರೋಗ್ಯ ಸೂತ್ರ

Image
 ಆರೋಗ್ಯ ಸೂತ್ರ ನಮ್ಮ ಶರೀರ ಎಂಬ ಮನೆಯ ಆರೋಗ್ಯದ ರಕ್ಷಣೆಗೂ ಒಂದು ರಕ್ಷಣಾ ವ್ಯವಸ್ಥೆ ಇರುತ್ತದೆ. ಈ ವ್ಯವಸ್ಥೆಯ ಹೆಸರೇ "ರೋಗ ನಿರೋಧಕ ಶಕ್ತಿ" ರೋಗ ನಿರೋಧಕ ಶಕ್ತಿಯ ಪೋಷಣೆ ಅತ್ಯಗತ್ಯ. ನಾವು ಆರೋಗ್ಯವಾಗಿರಲು ನಮ್ಮ ಶರೀರದ ರೋಗನಿರೋಧಕ ಶಕ್ತಿಯ ವ್ಯವಸ್ಥೆ  ಒಂದು ಸಂಪೂರ್ಣ ವ್ಯವಸ್ಥೆಯಾಗಿದೆ. ಇದು ಕೆಲಸ ಮಾಡುವ ರೀತಿ ಆಧುನಿಕ ವಿಜ್ಞಾನಿಗಳಿಗೆ, ವೈದ್ಯರಿಗೆ ಇನ್ನೂ ಸಂಪೂರ್ಣವಾಗಿ ಅರ್ಥವಾಗಿಲ್ಲ. 3000 ಸಾವಿರ ವರ್ಷಗಳ ಹಿಂದೆಯೇ ಮಹರ್ಷಿ ಪತಂಜಲಿಯ ಶಿಷ್ಯರಾದ ಮಹರ್ಷಿ ವಾಗ್ಬಾಟರು ಸಾವಿರಾರು ಸೂತ್ರಗಳನ್ನು ನೀಡಿದ್ದಾರೆ. ಅವು ಯಾವುವೆಂದರೆ: 1. ನಾವು ಯಾವ ಪ್ರದೇಶದಲ್ಲಿ ವಾಸಿಸುತ್ತಿದ್ದಿರೋ ಅಲ್ಲಿಯ ಪರಿಸರ ವಾತಾವರಣಕ್ಕೆ ತಕ್ಕ ರೀತಿಯ ಜೀವನ ಶೈಲಿಯನ್ನು ಅನುಸರಿಸಿ 2. ನೀರನ್ನು ಯಾವಾಗಲೂ ಕುದಿಯುತ್ತಿರಬೇಕು 3. ಯಾವುದೇ ಕಾರಣಕ್ಕೂ ರೆಫ್ರಿಜರೇಟರ್ ನೀರು ಖಂಡಿತ ಬೇಡ 4. ಊಟ ಮಾಡುವಾಗ ಮಧ್ಯ ಮಧ್ಯದಲ್ಲಿ ನೀರು ಕುಡಿಯಬಾರದು 5. ಬೆಳಗ್ಗಿನ ಉಪಹಾರವನ್ನು ತಪ್ಪಿಸಬಾರದು 6. ಊಟ ಮಾಡಿದ ಕೂಡಲೇ ನೀರು ಮಜ್ಜಿಗೆ ಕುಡಿಯಬೇಕು 7. ಬಿಸಿ ನೀರನ್ನು ಹೆಚ್ಚಾಗಿ ಕುಡಿಯುವುದರಿಂದ ಕೋಬಿನಾಂಶ ಕಡಿಮೆಯಾಗುತ್ತದೆ 8. ಬೆಳಿಗ್ಗೆ ಎದ್ದ ಕೂಡಲೇ ಎರಡು ಲೋಟ ಬಿಸಿ ನೀರು ಕುಡಿಯಿರಿ 9. ಪ್ರತಿ ದಿನ ಎಂಟು ತಾಸು ನಿದ್ದೆ ಮಾಡಿ ಜೀವನ ಶೈಲಿಯು ತುಂಬಾ ಮುಖ್ಯವಾಗಿರುತ್ತದೆ. ವೈಯಕ್ತಿಕ ನಿರ್ಧಾರಗಳ ಒಟ್ಟು ಗೂಡುವಿಕೆಯ ಅನಾರೋಗ್ಯ ಅಥವಾ ಸಾವಿನ ಕಾರಣ ಆಗಬಹ

ಭ್ರಷ್ಟಾಚಾರದ ಅಂತ್ಯ ಎಂದು..?

Image
  ಭ್ರಷ್ಟಾಚಾರದ ಅಂತ್ಯ ಎಂದು..? ಭಾರತದ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಭ್ರಷ್ಟಾಚಾರದಿಂದ ಪ್ರಜಾಪ್ರಭುತ್ವ ವ್ಯವಸ್ಥೆಯು ದುರ್ಬಲಗೊಳ್ಳುತ್ತಿದೆ, ಜೊತೆಗೆ ಆರ್ಥಿಕ ಅಭಿವೃದ್ಧಿಯನ್ನು ಕುಂಠಿತಗೊಳಿಸುತ್ತದೆ. ಅಧಿಕಾರದ ದುರುಪಯೋಗದಿಂದ ಪ್ರತಿಯೊಂದು ವಿಭಾಗಗಳಲ್ಲಿಯೂ ನಂಬಿಕೆಯೂ ಕುಗ್ಗಿಸುತ್ತದೆ ಅಷ್ಟೇ ಅಲ್ಲ ಭ್ರಷ್ಟಾಚಾರವು ರಾಷ್ಟ್ರದ ಆರ್ಥಿಕ  ಬೆಳವಣಿಗೆಯನ್ನು ತಡೆಯುತ್ತದೆ ಭ್ರಷ್ಟಾಚಾರವು ನೈತಿಕತೆ ಅಥವಾ ಜ್ಞಾನದ ಕೊರತೆಯಿಂದ ಉಂಟಾಗುವುದಿಲ್ಲ ವ್ಯಾಮೋಹದಿಂದ ಭ್ರಷ್ಟಾಚಾರಗಳು ಉಂಟಾಗುತ್ತವೆ. ಭ್ರಷ್ಟಾಚಾರ ಎಂದರೇನು ಭ್ರಷ್ಟಾಚಾರವು ಅಧಿಕಾರದ ಸ್ಥಾನದಲ್ಲಿರುವವರ ಆಕ್ರಮಾಣಿಕ ವರ್ತನೆಯಾಗಿದೆ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವುದು, ವೈಯಕ್ತಿಕ ಲಾಭಕ್ಕಾಗಿ ಒಬ್ಬರು ತಮಗೆ ವಹಿಸಿಕೊಟ್ಟ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಾಗ   ಭ್ರಷ್ಟಾಚಾರವು ಸಂಭವಿಸುತ್ತದೆ.   ಭಾರತದಲ್ಲಿ ಭ್ರಷ್ಟಾಚಾರವು ಕೇಂದ್ರ ರಾಜ್ಯ ಮತ್ತು ಸ್ಥಳೀಯ ಸರ್ಕಾರಿ ಏಜೆನ್ಸಿಗಳ ಆರ್ಥಿಕತೆಯ ಮೇಲೆ ಅನೇಕ ರೀತಿಯಲ್ಲಿ ಪರಿಣಾಮ ಬೀರುವ ಸಮಸ್ಯೆಯಾಗಿದೆ. 2021 ಅಲ್ಲಿ ಅವರ ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕ 180 ರಲ್ಲಿ 85ನೇ ಸ್ಥಾನದಲ್ಲಿ ದೇಶವನ್ನು ಶ್ರೇಣಿಕರಿಸಿದೆ ಅಲ್ಲಿ ಅತ್ಯಂತ ಕಡಿಮೆ ಶ್ರೇಯಾಂಕದ ದೇಶಗಳು ಅತ್ಯಂತ ಪ್ರಾಮಾಣಿಕ ಸಾರ್ವಜನಿಕ ವಲಯವನ್ನು ಹೊಂದಿವೆ. ಭ್ರಷ್ಟ ಭಾರತೀಯ ನಾಗರಿಕನು ಸ್ವಿಸ್ ಬ್ಯಾಂಕ್ ಗಳಲ್ಲಿ ಲಕ್ಷಾಂತರ ರೂಪಾಯಿಗಳನ್ನು  ಸಂಗ್ರಹಿಸ

ಭಾರತದಲ್ಲಿ ಸಲಿಂಗ ವಿವಾಹ: ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಹೇಳಿದ್ದೇನು?

Image
 ಭಾರತದಲ್ಲಿ ಸಲಿಂಗ ವಿವಾಹ: ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಹೇಳಿದ್ದೇನು? ಸಲಿಂಗ ವಿವಾಹಕ್ಕೆ ಕಾನೂನಿನ ಮಾನ್ಯತೆ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ದಂಪತಿಗಳಿಗೆ ಕೇಂದ್ರ ಸರ್ಕಾರ ವಿರೋಧಿಸಿದೆ. ಭಾನುವಾರ ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ ಅಫಿಡವಿಟ್ನಲ್ಲಿ ಕೇಂದ್ರ ಸರ್ಕಾರವು ಪಾಲುದಾರರಾಗಿ ಒಟ್ಟಿಗೆ ವಾಸಿಸುವುದು ಮತ್ತು ಒಂದೇ ಲಿಂಗದ ವ್ಯಕ್ತಿಗಳು ಲೈಂಗಿಕ ಸಂಬಂಧ ಹೊಂದುವುದನ್ನು ಭಾರತೀಯ ಕುಟುಂಬ ವ್ಯವಸ್ಥೆಯ ವಿರೋಧವಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಭಾರತೀಯ ಕುಟುಂಬ ವ್ಯವಸ್ಥೆಯ ಪ್ರಕಾರ ಜೈವಿಕ ಪುರುಷನು 'ಪತಿ'ಯಾಗಿ, ಜೈವಿಕ ಮಹಿಳೆ 'ಹೆಂಡತಿ'ಯಾಗಿ ಮತ್ತು ಇಬ್ಬರ ನಡುವಿನ ಒಕ್ಕೂಟದಿಂದ ಜನಿಸಿದರನ್ನು ಮಕ್ಕಳು ಎಂದು ಸರ್ಕಾರ ಹೇಳಿದೆ.  ಕೇಂದ್ರವು ತನ್ನ ಅಫಿಡವಿಟ್ನಲ್ಲಿ ಸಲಿಂಗ ವ್ಯಕ್ತಿಗಳ ವಿವಾಹದ ನೋಂದಣಿಯು ಅಸ್ತಿತ್ವದಲ್ಲಿರುವ ವೈಯಕ್ತಿಕ ಮತ್ತು ಕ್ರೋಡೀಕರಿಸಿದ ಕಾನೂನು ನಿಬಂಧನೆಗಳಾದ 'ನಿಷೇಧಿತ ಸಂಬಂಧದ ಪದವಿಗಳು', 'ಮದುವೆಯ ಷರತ್ತುಗಳು' ಮತ್ತು 'ವಿಧ್ಧಿಕ ಮತ್ತು ಧಾರ್ಮಿಕ ಅವಶ್ಯಕತೆಗಳು' ಉಲ್ಲಂಘನೆಗೆ ಕಾರಣವಾಗುತ್ತದೆ ಎಂದು ಪ್ರತಿಪಾದಿಸಿದೆ.  ಸಾಮಾಜಿಕ ಸಂಬಂಧದ ನಿರ್ದಿಷ್ಟ ರೂಪವನ್ನು ಗುರುತಿಸಲು ಯಾವುದೇ ಮೂಲಭೂತ ಹಕ್ಕು ಇರುವುದಿಲ್ಲ ಎಂದು ಸರ್ಕಾರ ಒತ್ತಿಹೇಳಿದೆ.  ಭಾರತದಲ್ಲಿ ಸಲಿಂಗ ವಿವಾಹದ ಕಾನೂನು ಸ್ಥಿತಿ: ಭಾರತದಲ್ಲಿ ಮದುವೆಗಳು ಭಿನ್ನಲಿಂಗೀಯ ದಂಪತ

ಬೆಂಗಳೂರು ಮತ್ತು ಮೈಸೂರು ಹೆದ್ದಾರಿಯಲ್ಲಿ ಟೋಲ್ ಹೆಸರಿನಲ್ಲಿ ಲೂಟಿ

Image
 ಬೆಂಗಳೂರು ಮತ್ತು ಮೈಸೂರು ಹೆದ್ದಾರಿಯಲ್ಲಿ ಟೋಲ್ ಹೆಸರಿನಲ್ಲಿ ಲೂಟಿ ಸಾರ್ವಜನಿಕರಾದ ನಾವು ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಬೇಕಾದರೆ ಟೋಲ್ ಕಟ್ಟಬೇಕು ಎಂಬುದು ಸಾರ್ವಜನಿಕರ ಕರ್ತವ್ಯವೇ ಸರಿ, ಆದರೆ ಈ ಬೆಂಗಳೂರು ಮತ್ತು ಮೈಸೂರು ಹೆದ್ದಾರಿಯಲ್ಲಿ ಬರುವಂಥ ಟೋಲ್ ನಲ್ಲಿ ಮಾತ್ರ ತೆಗೆದುಕೊಳ್ಳಬೇಕಾದ ತೇರಿಗೆಗಿಂತ ದುಪ್ಪಟ್ಟು ಹೆಚ್ಚು ವಸೂಲಿ ಮಾಡುತ್ತಿದ್ದಾರೆ. ಇತರೆ ಟೋಲ್ ಗಳಲ್ಲಿ 150-200 ರೂಪಾಯಿ ತೆಗೆದುಕೊಂಡರೆ, ಈ ಟೋಲ್ ನಲ್ಲಿ ಮಾತ್ರ ಒಂದು ವಾಹನದ ಮೇಲೆ 350 ರಿಂದ 920 ರೂ ವರೆಗೆ ವಸೂಲಿ ಮಾಡುತ್ತಿದ್ದಾರೆ. ಹಾಗಾದರೆ ಒಂದು ವಾಹನಕ್ಕೆ 920 ರಂತೆ ವಸೂಲಿ ಮಾಡುವುದಾದರೆ ಟೋಲ್ ಹೆಸರಲ್ಲಿ ಸರ್ಕಾರ ತನ್ನ ಬೊಕ್ಕಸವನ್ನು ತುಂಬಿಸಿಕೊಳ್ಳುತ್ತಿದೆ. ಹಾಗಾದರೆ ಟ್ಯಾಕ್ಸ್ ಹೆಸರಲ್ಲಿ ಸರ್ಕಾರ ಸಾರ್ವಜನಿಕರಿಂದ ಹಣವನ್ನು ವಸೂಲಿ ಮಾಡುವುದಾದರೆ ದಿನ ನಿತ್ಯದ ಕೆಲಸಕ್ಕಾಗಿ ಬೆಂಗಳೂರಿನಿಂದ ಮೈಸೂರಿಗೆ ಹೊಡಾಡುವ ಸಾಮಾನ್ಯ ಜನರ ಕಷ್ಟವನ್ನು ಯಾರ ಬಳಿಯಲ್ಲಿ ಕೇಳಬೇಕು.

ಚುನಾವಣೆ ವ್ಯಾಪಾರ ಅಲ್ಲ- ನನ್ನ ಮತ ಮಾರಾಟಕ್ಕಿಲ್ಲ

Image
 ಚುನಾವಣೆ ವ್ಯಾಪಾರ ಅಲ್ಲ- ನನ್ನ ಮತ ಮಾರಾಟಕ್ಕಿಲ್ಲ  ನಮ್ಮ ತೋರು ಬೆರಳಿನಲ್ಲಿದೆ ಸ್ವಾಭಿಮಾನದ ಹೋರಾಟ:-  ಮತಗಳನ್ನು ಮಾರಾಟ ಮಾಡಿಕೊಳ್ಳುವುದು ಸಂವಿಧಾನಕ್ಕೆ ಮಾಡುವ ದೊಡ್ಡಅಪಚಾರ. ಮತದಾರನಿಗೆ ಚುನಾವಣೆ ಎನ್ನುವುದು ದೇವರ ಪೂಜೆ ಇದ್ದಂತೆ ಇಲ್ಲಿ ವಿಘ್ನವಾದರೆ ಮುಂದಿನ ಐದು ವರ್ಷಗಳ ಕಾಲ ನರಕ ಅನುಭವಿಸಬೇಕಾಗುತ್ತದೆ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಇಂದು ತೀರ ಗಂಭೀರ ಹಂತವೊಂದನ್ನು ತಲುಪಿದೆ.ಬಡವರ ಹಾಗೂ ಸಮಾಜದಿಂದ ನಿರ್ಲಕ್ಷ ಕ್ಕೋಳಗಾದವರ ಹಕ್ಕುಗಳು ಹಾಗೂ ಅರ್ಹತೆಗಳು ಸಾರಸಗಟಾಗಿ ಅಸಡ್ಡೆಗೊಳ್ಳುತ್ತಿವೆ. ಅಲ್ಲದೆ ಅದನ್ನು ವ್ಯವಸ್ಥಿತವಾಗಿ ಉಲ್ಲಂಘಿಸಲಾಗುತ್ತಿದೆ. ಚುನಾಯಿತ ಪ್ರತಿನಿಧಿಗಳು ಜನಪ್ರತಿನಿಧಿಗಳoತಲ್ಲ ಅವರೇ ಜನನಾಯಕರಂತೆ ವರ್ತಿಸುತ್ತಿದ್ದಾರೆ.  ಸರಕಾರ ತಪ್ಪಿದ್ದರೆ ಪ್ರಶ್ನಿಸುವ ಹಕ್ಕನ್ನು ಸಂವಿಧಾನ ನಮಗೆ ನೀಡಿದೆ.ಆದರೆ ನಮ್ಮ ಮತವನ್ನು ಮಾರಿಕೊಂಡಿದ್ದರೆ ನಮಗೆ ಸರ್ಕಾರವನ್ನು ಪ್ರಶ್ನಿಸುವ ನೈತಿಕತೆ ಇರುವುದಿಲ್ಲ. ಹಳ್ಳಿಗಳಲ್ಲಿ ಹಾಗೂ ಹಿಂದುಳಿದ ನಗರ ಪ್ರದೇಶಗಳಲ್ಲಿ ಇದು ಕಣ್ಣು ಕೊರೈಸುವ ಸತ್ಯವಾಗಿದೆ.ಇಂತಹ ವಿಲಕ್ಷಣ ಸನ್ನಿವೇಶದಲ್ಲಿ ಮಹತ್ವದ ಆಶಾಕಿರಣವಾಗಿ ಕಾಣಿಸುವುದೇ ನನ್ನ ಮತ ಮಾರಾಟಕ್ಕಿಲ್ಲ ಎನ್ನುವ ಆಂದೋಲನ . ("My vote not for sale ").  ಪಾರದರ್ಶಕ ನ್ಯಾಯಯುತ ಹಾಗೂ ಭ್ರಷ್ಟಾಚಾರದ ಸೋಂಕೆ ಇಲ್ಲದ ಚುನಾವಣಾ ಪ್ರಕ್ರಿಯೆಗೆ ಅವಕಾಶವಿರಬೇಕೆಂಬುದೇ ಈ ಆಂದೋಲನದ ಮೂಲ ಆಗ್ರಹ. ಇದರ ಮೂಲಬೇಡಿಕೆ :