Posts

Showing posts from July, 2023

ಸಂಗೀತವೂ ಒಂದು ಮದ್ದು : ಔಷಧವೂ ಭರಿಸಲಾಗದ ಗಾಯಗಳನ್ನು ಸಂಗೀತ ಗುಣಪಡಿಸುತ್ತದೆ

Image
 ಸಂಗೀತವೂ ಒಂದು ಮದ್ದು : ಔಷಧವೂ ಭರಿಸಲಾಗದ ಗಾಯಗಳನ್ನು ಸಂಗೀತ ಗುಣಪಡಿಸುತ್ತದೆ " Music can heal the wound, That medicine cannot touch " ಎಂದು " ವರ್ಸಸ್ ಆಫ್ ಹ್ಯಾಪಿನೆಸ್"ನ ಲೇಖಕ ಡೆಬಾಸಿಷ್ ಮ್ರಿದಾ ( Debasish Mridha) ಹೇಳಿದ್ದಾರೆ. ಇದರ ಅರ್ಥ  ಔಷಧವೂ ಭರಿಸಲಾಗದ ಗಾಯಗಳನ್ನು ಸಂಗೀತ ಗುಣಪಡಿಸುತ್ತದೆ ಎಂದು. ಹೌದು ಸಂಗೀತಕ್ಕೆ ಇಂತಹ ಒಂದು ಅದ್ಭುತ ಶಕ್ತಿ ಇದೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಹಾಗಿದ್ರೆ ಸಂಗೀತದಿಂದ ನಮಗಾಗುವ  ಆರೋಗ್ಯ ಪ್ರಯೋಜನಗಳು ಯಾವುವು ಎಂದು ತಿಳಿಯೋಣ ಬನ್ನಿ .  ನೀವು ಯಾವಾಗಲೂ ಸಂಗೀತ ಕೇಳುತ್ತಾ ಇರುತ್ತೀರಾ? ಮ್ಯೂಸಿಕ್ ಅಂದ್ರೆ ನಿಮಗೆ ಅಷ್ಟೊಂದು ಇಷ್ಟನಾ..? ಒಂದುವೇಳೆ ನೀವು ಸಂಗೀತ ಕೇಳುವ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದರೆ ಖಂಡಿತ ನೀವು  ಸಂಗೀತದಿಂದಾಗುವ ಆರೋಗ್ಯದ ಲಾಭಗಳನ್ನು ಪಡೆಯುತ್ತಿದ್ದೀರಿ. ಹೌದು ಸಂಗೀತಕ್ಕೂ - ಆರೋಗ್ಯಕ್ಕೂ ಅವಿನಾಭಾವ ಸಂಬಂಧವಿದೆ. ಯಾರು ಸಂಗೀತದೊಳಗಿನ ಭಾವವನ್ನು ಅರ್ಥೈಸಿಕೊಂಡು ಆಲಿಸುತ್ತಾರೋ ಅವರಿಗೆ ಸಂಗೀತದಿಂದಾಗುವ ಆರೋಗ್ಯ ಪ್ರಯೋಜನಗಳ ಅನುಭವವಾಗಿರುತ್ತದೆ.ಕೆಲವು ಹಾಡುಗಳನ್ನು ಅಥವಾ ಮ್ಯೂಸಿಕ್ ಅನ್ನು ಕೇಳಿದಾಗ ಬೇಸರದಲ್ಲಿದ್ದರೂ ಮನಸ್ಸಿಗೆ  ಸಮಾಧಾನ ಎನಿಸುತ್ತದೆಯಲ್ಲವೇ, ಅದಕ್ಕೆ ಕಾರಣವಿದೆ. ಮೆದುಳು ಸಂಗೀತವನ್ನು ಸ್ವೀಕರಿಸುವ ರೀತಿ: ನಮ್ಮ ಮೆದುಳು  ಕರ್ಕಶ ಶಬ್ದ‌ ಮತ್ತು  ಸುಮಧುರ ಶಬ್ದಗಳೆರಡನ್ನೂ  ಸ್ವೀಕರ

ಬೆಳಗ್ಗೆ ಹಲ್ಲುಜ್ಜುವ ಮೊದಲೇ ನೀರು ಕುಡಿಯಿರಿ: ಅದ್ಭುತ ಆರೋಗ್ಯ ಅನುಕೂಲ ನಿಮ್ಮದಾಗಿಸಿ

Image
 ಬೆಳಗ್ಗೆ ಹಲ್ಲುಜ್ಜುವ ಮೊದಲೇ ನೀರು ಕುಡಿಯಿರಿ: ಅದ್ಭುತ ಆರೋಗ್ಯ ಅನುಕೂಲ ನಿಮ್ಮದಾಗಿಸಿ ಹಲ್ಲುಜ್ಜುವ ಮೊದಲು ನೀರು ಕುಡಿಯುವುದು ನಿಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ನಿಮಗೆ ತಿಳಿದಿದೆಯೇ? ಹೌದು.. ಬೆಳಗ್ಗೆ ಹಲ್ಲುಜ್ಜುವ ಮೊದಲು ನೀರು ಕುಡಿಯುವುದರಿಂದ ನಾನಾ  ಆರೋಗ್ಯ ಪ್ರಯೋಜನಗಳನ್ನು ನಿಮ್ಮದಾಗಿಸಬಹುದು.  ಸಾಮಾನ್ಯವಾಗಿ ನಾವೆಲ್ಲಾ ಮನೆಯಲ್ಲಿ ಬೆಳಗ್ಗೆ (Morning) ಎದ್ದ ತಕ್ಷಣ ನಮ್ಮ ಮನೆಯಲ್ಲಿರುವ ಹಿರಿಯರು ನಮಗೆ ‘ಹಾಸಿಗೆಯಿಂದ ಬೆಳಿಗ್ಗೆ ಎದ್ದ ತಕ್ಷಣವೇ ಒಂದು ಲೋಟ ಬಿಸಿ ನೀರನ್ನು (Hot Water) ಕುಡಿಯಿರಿ, ಆರೋಗ್ಯಕ್ಕೆ ಒಳ್ಳೆಯದು’ ಎಂದು ಹೇಳುತ್ತಾ ಇರುವುದನ್ನು ನಾವು ಪ್ರತಿದಿನ ಕೇಳುತ್ತಿರುತ್ತೇವೆ ಅಂತ ಹೇಳಬಹುದು. ಹಾಗೆ ಮಾಡುವುದರಿಂದ ಆರೋಗ್ಯಕರ ಪ್ರಯೋಜನಗಳಿವೆ ಎಂದು ನಮಗೆ ನಮ್ಮ ಮನೆಯಲ್ಲಿನ ಹಿರಿಯರು ಹೇಳಿದರೂ ಸಹ ನಾವು ಅದನ್ನು ಅನೇಕ ಬಾರಿ ನಿರ್ಲಕ್ಷಿಸುತ್ತೇವೆ. ಏನೋ ಹಿರಿಯರು ಹೇಳುತ್ತಿದ್ದಾರೆ ಎಂದು ನಾವು ಒಂದೆರಡು ದಿನ ಅದನ್ನು ಪಾಲಿಸಿದರೂ ಮೂರನೆಯ ದಿನ ಹಾಗೆ ಹಾಸಿಗೆಯಿಂದ (Bed) ಎದ್ದು ಅವಸರದಲ್ಲಿ ಬಾತ್‌ರೂಮ್ ಗೆ ಹೋಗಿ ಬಡಬಡನೆ ಹಲ್ಲುಜ್ಜಿಕೊಂಡು ಬಿಡುತ್ತೇವೆ. ಆನಂತರ ‘ಅರೇ ಹಲ್ಲುಜ್ಜುವ (Brushing) ಮೊದಲು ನೀರು ಕುಡಿಯುವುದನ್ನೇ ಮರೆತುಬಿಟ್ಟೆ’ ಎಂದು ಹೇಳುವುದುಂಟು.ಕೆಲವರಿಗೆ ಬೆಳಗ್ಗೆ ಹಾಸಿಗೆಯಿಂದ ಎದ್ದ ತಕ್ಷಣವೇ ಕುಡಿಯಲು ಚಹಾ ಅಥವಾ ಟೀ ಬೇಕೇ ಬೇಕು, ಇಲ್ಲದಿದ್ದರೆ ಅವರಿಗೆ ಬೆಳಗ್ಗೆ ಎದ್ದ ಹ

ಸ್ಟಾರ್‌ ಫ್ರೂಟ್‌ ತಿನ್ನಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ Benefifs of Star Fruit

Image
 ಸ್ಟಾರ್‌ ಫ್ರೂಟ್‌ ತಿನ್ನಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ ಭಾರತದಲ್ಲಿ ಮಳೆಗಾಲವು (Rainy Season) ಆರಂಭವಾದ ಕೂಡಲೇ ಸುಡುವ ಬೇಸಿಗೆಯಿಂದ ನಮಗೆ ಮುಕ್ತಿ ಸಿಗುತ್ತೆ. ವಾತಾವರಣ (Weather) ತಂಪಾಗುತ್ತೆ. ಜೊತೆಗೆ ಪರಿಸರದಲ್ಲೂ ಅನೇಕ ಬದಲಾವಣೆಗಳಾಗುತ್ತವೆ.  ಇದ್ದಕ್ಕಿದ್ದಂತೆ ವಾತಾವರಣ ಬದಲಾದಾಗ ಮನುಷ್ಯನ ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಆಗಿ ಅನೇಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆ ಆರೋಗ್ಯ ಸಮಸ್ಯೆಗಳಿಂದ ದೂರವಿರಲು ಮತ್ತು ರೋಗ ನಿರೋಧಕ ಶಕ್ತಿಯನ್ನು ಸುಧಾರಿಸಲು ನಾವು ಆಯಾ ಕಾಲದಲ್ಲಿ ಸಿಗುವ ಹಣ್ಣು ಮತ್ತು ತರಕಾರಿಗಳನ್ನು  ತಿಂದು ಅನಾರೋಗ್ಯಕ್ಕೆ ತುತ್ತಾಗುವುದನ್ನು ತಡೆಯಬಹುದು. ಈ ರೀತಿ ಮಳೆಗಾಳದಲ್ಲಿ ನಮ್ಮ ಆರೋಗ್ಯ ಕಾಪಾಡುವ ಒಂದು ಹಣ್ಣಿನ ಪರಿಚಯ ಮಾಡಿಸ್ತೀವಿ ಬನ್ನಿ.   ಯಸ್‌, ಸ್ಟಾರ್ ಫ್ರೂಟ್. ಇದನ್ನು ಕ್ಯಾರಂಬೋಲ ಹಣ್ಣು ಅಂತಲೂ ಕರೀತಾರೆ. ಹಸಿರು  ಹಳದಿ ಬಣ್ಣದ ಈ ಹಣ್ಣನ್ನು ಕತ್ತರಿಸಿದ ನಂತರ ನಕ್ಷತ್ರದಂತಹ ಆಕಾರ ಕಾಣಬಹುದಾಗಿದೆ. ಹುಳಿ ರುಚಿಯನ್ನು ಹೊಂದಿರುವ ಇದು ಕ್ವೆರ್ಸೆಟಿನ್, ಗ್ಯಾಲಿಕ್ ಆಮ್ಲ ಮತ್ತು ಎಪಿಕಾಟೆಚಿನ್ ಸೇರಿದಂತೆ ಹಲವು ಪೋಷಕ ತತ್ವಗಳನ್ನು ಹೊಂದಿದ್ದು ಆರೋಗ್ಯಕ್ಕೆ ಉತ್ತಮವಾಗಿರುತ್ತದೆ. ಶಕ್ತಿಯುತವಾದ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳನ್ನು ಮತ್ತು ವಿವಿಧ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ. ಸ್ಟಾರ್ ಹಣ್ಣು ಕೊಬ್ಬಿನ ಅಂಶಗಳನ್ನು ಕಡಿಮೆ ಮಾಡುತ್ತದೆ.  ಸ್ಟಾರ್‌ಫ್ರೂಟ್‌

ಮಾನವನ ಆರೋಗ್ಯ ಸಂಜೀವಿನಿ – ‘ಸ್ಪಿರುಲಿನಾ’ Health Benefits of Spirulina

Image
 ಮಾನವನ ಆರೋಗ್ಯ ಸಂಜೀವಿನಿ – ‘ಸ್ಪಿರುಲಿನಾ’  ಸ್ಪಿರುಲಿನಾ  ಸಮುದ್ರದಲ್ಲಿ ಸಿಗುವ ವಿಶೇಷ ಬಗೆಯ ಪಾಚಿ. ಇದು ನೀಲಿ ಹಸಿರಿನ ಬಣ್ಣದಿಂದ ಕೂಡಿದ ಪಾಚಿಯಾಗಿದೆ. ಇದರ ವಿಶೇಷತೆ ಏನಂದ್ರೆ ಇದು ಮನುಷ್ಯರಲ್ಲಿ ಯಾವುದೇ ಗಮನಾರ್ಹ ಅಡ್ಡಪರಿಣಾಮಗಳಿಲ್ಲದೆ ಪ್ರೋಟೀನ್ ಮತ್ತು ವಿಟಮಿನ್ ಪೂರಕಗಳ ಮೂಲದ ರೂಪದಲ್ಲಿ ಬಳಸಲಾಗುತ್ತದೆ.ಸ್ಪಿರುಲಿನಾವು ತೇವಾಂಶವುಳ್ಳ ಮಣ್ಣು, ಮಿಶ್ರಲೋಹ ಲವಣಯುಕ್ತ ನೀರು, ಮರಗಳ ತೊಗಟೆ ಮತ್ತು ತೇವಾಂಶವುಳ್ಳ ಗೋಡೆಗಳ ಮೇಲೆ ಹಸಿರು, ಕಂದು ಅಥವಾ ಕೆಲವು ಕಪ್ಪು ಪದರಗಳ ರೂಪದಲ್ಲಿ ಕಂಡುಬರುತ್ತದೆ.  ಇದು ಕ್ಷಾರೀಯ ಸರೋವರಗಳಲ್ಲಿ ಹೆಚ್ಚಾಗಿ ಬೆಳೆಯುತ್ತದೆ  ಮತ್ತು ಸಮುದ್ರದ  ತುಂಬಾ  ತಳಭಾಗದಲ್ಲಿ ದೊರೆಯುತ್ತದೆ. ಇದು ಭಾರತ,ಅಮೆರಿಕ, ಸ್ಪೇನ್, ಜಪಾನ್ ಹಾಗೂ ವಿಶ್ವದಾದ್ಯಂತ  ಕೆಲವು ದೇಶಗಳಲ್ಲಿ  ಮಾತ್ರ ಬೆಳೆಯುತ್ತಾರೆ.   ಸ್ಪಿರುಲಿನಾದಲ್ಲಿ ಶೇ. 60 ರಿಂದ 70 ರಷ್ಟು ಪ್ರೋಟೀನ್ ಇರುತ್ತದೆ. ಇದರಲ್ಲಿ ವಿಟಮಿನ್ ಬಿ 12, ಖನಿಜಗಳು, ಪ್ರೊ ವಿಟಮಿನ್ ಎ, ಕಬ್ಬಿಣದ ಅಂಶಗಳು ಅತ್ಯಧಿಕ  ಪ್ರಮಾಣದಲ್ಲಿ ಕಂಡುಬರುತ್ತದೆ ಮತ್ತು ಅನೇಕ ರೋಗಗಳ  ಲಕ್ಷಣಗಳನ್ನು ಸುಧಾರಿಸುತ್ತದೆ.  ಉದಾಹರಣೆ :  ಸಮುದ್ರದಲ್ಲಿ  ಆಮೆಯು ಇದನ್ನು ತಿನ್ನುವುದರ ಮೂಲಕ ಶೇಕಡ 150 ರಿಂದ 200 ವರ್ಷ ತನ್ನ ಜೀವಾವಧಿ ಕಳೆಯುತ್ತದೆ, ಇದರ ಮೂಲಕ ತಂತ್ರಜ್ಞಾನಿಗಳು   ಸ್ಪೀರೂಲಿನವನ್ನು  ಜನರಿಗೆ ಪರಿಚಯಿಸಿದ್ದಾರೆ. ಆರೋಗ್ಯ ಪ್ರಯೋಜನಗಳು :  1)ಆಂಟಿಅಲರ್ಜಿಕ್ 2)ಆಂಟ

‘ಕಾರ್ನ್ ಸಿಲ್ಕ್’ ಜೋಳದ ಕೂದಲನ್ನು ಬಿಸಾಡುವ ಮುನ್ನ ಈ ವರದಿ ಓದಿ

Image
 ‘ಕಾರ್ನ್ ಸಿಲ್ಕ್’ ಜೋಳದ ಕೂದಲನ್ನು ಬಿಸಾಡುವ  ಮುನ್ನ ಈ ವರದಿ ಓದಿ ಜೋಳವನ್ನು ನೀವೆಲ್ಲರೂ ಹೆಚ್ಚು ಇಷ್ಟಪಟ್ಟು ತಿಂದು,  "ಕಾರ್ನ್ ಸಿಲ್ಕ್ " (Corn Silk) ಅಥವಾ ಜೋಳದ ಕೂದಲನ್ನು ಕಿಂಚಿತ್ತೂ ಯೋಚಿಸದೆ  ಧಾರಾಳವಾಗಿ ಬಿಸಾಡುತ್ತೀರಾ? ಹಾಗಾದ್ರೆ ಈ ವರದಿ ಓದಲೇ ಬೇಕು. ಯಾಕಂದ್ರೆ  ಜೋಳದ ಕೂದಲಿನಿಂದ ಆಗುವ ಆರೋಗ್ಯ ಪ್ರಯೋಜನಗಳನ್ನು ತಿಳಿದ್ರೆ, ಮುಂದೆ ಖಂಡಿತಾ ನೀವು ಜೋಳದ ಕೂದಲನ್ನು ಬಿಸಾಡುವುದಿಲ್ಲ. ಹಾಗಾದ್ರೆ ಜೋಳದ ಕೂದಲಿನಿಂದಾಗುವ ಆರೋಗ್ಯ ಪ್ರಯೋಜನಗಳು ಏನೆಂದು ತಿಳಿಯೋಣ ಬನ್ನಿ ...!! 1.   ಜೋಳದ ಕೂದಲು ಮೂತ್ರಪಿಂಡದ ಕಲ್ಲುಗಳನ್ನು ತಡೆಗಟ್ಟಲು ಬಹಳಷ್ಟು ಉಪಯೋಗಕಾರಿಯಾಗಿ ಕೆಲಸ ಮಾಡುತ್ತದೆ. 2. ಇನ್ನು "ಕಾರ್ನ್ ಸಿಲ್ಕ್" ನಲ್ಲಿರುವ ವಿಟಮಿನ್ "ಕೆ" ಗಾಯವಾದಾಗ ರಕ್ತ ಹೆಪ್ಪುಗಟ್ಟಲು ಸಹಾಯ ಮಾಡುತ್ತದೆ. ಇದರಿಂದ ದೇಹದಲ್ಲಾಗುವ ರಕ್ತಸ್ರಾವವನ್ನು ತಡೆಯಬಹುದು. 3. ಇನ್ನು ಇತ್ತೀಚಿನ ದಿನಗಳಲ್ಲಿ ಕಾರ್ನ್ ಸಿಲ್ಕ್  ದೇಹದಲ್ಲಿಯ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಲು ಸಹಕಾರಿ ಎಂದು ತಿಳಿದುಬಂದಿದೆ. ಹಾಗಾಗಿ ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಣ ಮಾಡುತ್ತದೆ. 4. ಇದಿಷ್ಟೇ ಅಲ್ಲದೆ ದೇಹದಲ್ಲಿನ ಕೊಲೆಸ್ಟ್ರಾಲ್ ಅನ್ನೂ ಸಹ ನಿಯಂತ್ರಣ  ಮಾಡುತ್ತದೆ.  ಹಾಗಿದ್ದರೆ "ಕಾರ್ನ್ ಸಿಲ್ಕ್" ಬಳಸೋದು ಹೇಗೆ ...? 1. ನೀರನ್ನು ಕುದಿಸಿ , ಅದಕ್ಕೆ ಸ್ವಲ್ಪ ನಿಂಬ