‘ಕಾರ್ನ್ ಸಿಲ್ಕ್’ ಜೋಳದ ಕೂದಲನ್ನು ಬಿಸಾಡುವ ಮುನ್ನ ಈ ವರದಿ ಓದಿ

 ‘ಕಾರ್ನ್ ಸಿಲ್ಕ್’ ಜೋಳದ ಕೂದಲನ್ನು ಬಿಸಾಡುವ  ಮುನ್ನ ಈ ವರದಿ ಓದಿ


ಜೋಳವನ್ನು ನೀವೆಲ್ಲರೂ ಹೆಚ್ಚು ಇಷ್ಟಪಟ್ಟು ತಿಂದು,  "ಕಾರ್ನ್ ಸಿಲ್ಕ್ " (Corn Silk) ಅಥವಾ ಜೋಳದ ಕೂದಲನ್ನು ಕಿಂಚಿತ್ತೂ ಯೋಚಿಸದೆ  ಧಾರಾಳವಾಗಿ ಬಿಸಾಡುತ್ತೀರಾ? ಹಾಗಾದ್ರೆ ಈ ವರದಿ ಓದಲೇ ಬೇಕು. ಯಾಕಂದ್ರೆ  ಜೋಳದ ಕೂದಲಿನಿಂದ ಆಗುವ ಆರೋಗ್ಯ ಪ್ರಯೋಜನಗಳನ್ನು ತಿಳಿದ್ರೆ, ಮುಂದೆ ಖಂಡಿತಾ ನೀವು ಜೋಳದ ಕೂದಲನ್ನು ಬಿಸಾಡುವುದಿಲ್ಲ.

ಹಾಗಾದ್ರೆ ಜೋಳದ ಕೂದಲಿನಿಂದಾಗುವ ಆರೋಗ್ಯ ಪ್ರಯೋಜನಗಳು ಏನೆಂದು ತಿಳಿಯೋಣ ಬನ್ನಿ ...!!

1.   ಜೋಳದ ಕೂದಲು ಮೂತ್ರಪಿಂಡದ ಕಲ್ಲುಗಳನ್ನು ತಡೆಗಟ್ಟಲು ಬಹಳಷ್ಟು ಉಪಯೋಗಕಾರಿಯಾಗಿ ಕೆಲಸ ಮಾಡುತ್ತದೆ.

2. ಇನ್ನು "ಕಾರ್ನ್ ಸಿಲ್ಕ್" ನಲ್ಲಿರುವ ವಿಟಮಿನ್ "ಕೆ" ಗಾಯವಾದಾಗ ರಕ್ತ ಹೆಪ್ಪುಗಟ್ಟಲು ಸಹಾಯ ಮಾಡುತ್ತದೆ. ಇದರಿಂದ ದೇಹದಲ್ಲಾಗುವ ರಕ್ತಸ್ರಾವವನ್ನು ತಡೆಯಬಹುದು.

3. ಇನ್ನು ಇತ್ತೀಚಿನ ದಿನಗಳಲ್ಲಿ ಕಾರ್ನ್ ಸಿಲ್ಕ್  ದೇಹದಲ್ಲಿಯ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಲು ಸಹಕಾರಿ ಎಂದು ತಿಳಿದುಬಂದಿದೆ. ಹಾಗಾಗಿ ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಣ ಮಾಡುತ್ತದೆ.

4. ಇದಿಷ್ಟೇ ಅಲ್ಲದೆ ದೇಹದಲ್ಲಿನ ಕೊಲೆಸ್ಟ್ರಾಲ್ ಅನ್ನೂ ಸಹ ನಿಯಂತ್ರಣ  ಮಾಡುತ್ತದೆ. 


ಹಾಗಿದ್ದರೆ "ಕಾರ್ನ್ ಸಿಲ್ಕ್" ಬಳಸೋದು ಹೇಗೆ ...?

1. ನೀರನ್ನು ಕುದಿಸಿ , ಅದಕ್ಕೆ ಸ್ವಲ್ಪ ನಿಂಬೆರಸ ಬೆರೆಸಿ , ಕಾರ್ನ್ ಸಿಲ್ಕ್ ಸೇರಿಸಿ ಬೇಯಿಸಿ ಕುಡಿಯಬಹುದು.

2. ಮಿಕ್ಸಿ ಜಾರ್ನಲ್ಲಿ ಸ್ವಲ್ಪ ನೀರಿಗೆ ಜೇನುತುಪ್ಪ ಸೇರಿಸಿ , ಕಾರ್ನ್ ಸಿಲ್ಕ್ ಸೇರಿಸಿ ರುಬ್ಬಿ ,ಸೂರ್ಯನ ಬಿಸಿಲಿನಲ್ಲಿ ಇರಿಸಿ ಸಂಜೆ ಕುಡಿದರೆ ಉತ್ತಮ. 

ಕಾರ್ನ್ ಸಿಲ್ಕ್ ಟೀ :- 

ಕುದಿಯುವ ನೀರಿಗೆ  ಸ್ವಲ್ಪ ಜೇನುತುಪ್ಪ ಬೆರೆಸಿ , ಕಾರ್ನ್ ಸಿಲ್ಕ್ ಸೇರಿಸಿ ಕುಡಿಯುವುದೇ  "ಕಾರ್ನ್ ಟೀ"

ದಿನಕ್ಕೆ ಮೂರು ಬಾರಿ ಕಾರ್ನ್ ಟೀ ಕುಡಿದರೆ ಸಂಧಿವಾತ (Goat) ಮಾಯವಾಗುತ್ತದೆ. ಅದಲ್ಲದೇ ದೇಹದಿಂದ ವಿಷಕಾರಿ ಅಂಶಗಳನ್ನು ಹೊರಹಾಕಲು,ಹೃದಯರೋಗ , ಮೂತ್ರದಸೋಂಕು ಇತ್ಯಾದಿಗಳನ್ನು ತಡೆಯಲು ಮೂತ್ರವರ್ದಕ ಗುಣಲಕ್ಷಣಗಳನ್ನು ಕಾರ್ನ್ ಟೀ ಹೊಂದಿದೆ.

ಆದ್ರೆ ಒಂದು ಪ್ರಮುಖ ಸೂಚನೆ. ಕಾರ್ನ್ ಸಿಲ್ಕ್ ಅನ್ನು ಬಳಸುವಾಗ ಸಾವಯವ ರೀತಿಯಲ್ಲಿ ಬೆಳೆದದ್ದನ್ನು ಮಾತ್ರ ಉಪಯೋಗಿಸಬೇಕು ,  ಕೀಟನಾಶಕ ಸಿಂಪಡಿಸಿರುವುದನ್ನು ಬಳಸಬಾರದು. ಕಾರ್ನ್ ಸಿಲ್ಕ್"ನಿಂದ ಇಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿರುವಾಗ ನಾವ್ಯಾಕೆ ಅದನ್ನ ಬಳಸದೇ ಬಿಸಾಡಬೇಕಲ್ವಾ..!!??


Gayatri M.N

Comments

Popular posts from this blog

ಮಾನವನ ಆರೋಗ್ಯ ಸಂಜೀವಿನಿ – ‘ಸ್ಪಿರುಲಿನಾ’ Health Benefits of Spirulina

ಸ್ಟಾರ್‌ ಫ್ರೂಟ್‌ ತಿನ್ನಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ Benefifs of Star Fruit