Posts

Showing posts from May, 2023

ಹಲ್ಲು ಕುಳಿ ನಿರ್ಲಕ್ಷ್ಯ ಬೇಡ, ಜೀವನ ಪರ್ಯಂತ ಸಮಸ್ಯೆ ಕೊಡುತ್ತೆ ಎಚ್ಚರ !

Image
ಹಲ್ಲು ಕುಳಿ ನಿರ್ಲಕ್ಷ್ಯ ಬೇಡ, ಜೀವನ ಪರ್ಯಂತ ಸಮಸ್ಯೆ ಕೊಡುತ್ತೆ ಎಚ್ಚರ !  ಹಲ್ಲಿನ ಆರೈಕೆ ಆರಂಭದ ಹಂತದಲ್ಲಿಯೇ ಮಾಡುತ್ತಾ ಬರಬೇಕಾಗುತ್ತದೆ .ಹಲ್ಲಿನ ಕೊಳೆತ ಅಥವಾ ಹಲ್ಲಿನ ಕುಳಿಗಳು ಮಕ್ಕಳಲ್ಲಿ ಕಾಣಿಸುವ ಸಮಸ್ಯೆಗಳಲ್ಲಿ ಒಂದಾಗಿದೆ . ಕುಳಿಗಳನ್ನು ಇತ್ತೀಚಿನ ಪೋಷಕರು ನಿರ್ಲಕ್ಷ್ಯ ಭಾವದಿಂದ ನೋಡುತ್ತಿದ್ದಾರೆ ಆದರೆ ಅದು ತಪ್ಪು ಹಲ್ಲಿನ ಕುಳಿ ಕೊಳೆತವಾಗಿ ಮಾರ್ಪಟ್ಟು ಶಾಶ್ವತ ಹಲ್ಲಿನ ಸಮಸ್ಯೆಗೆ ಕಾರಣವಾಗಬಹುದು . ಹಲ್ಲುಗಳನ್ನು ಆರೋಗ್ಯವಾಗಿಡಲು ಕೆಲವೊಂದು ಉತ್ತಮ ಮಾರ್ಗಗಳನ್ನು ಅನುಸರಿಸಬೇಕು  ಮಕ್ಕಳಲ್ಲಿನ ಹಲ್ಲಿನ ಆರೈಕೆ ಮಗು ಜನಿಸಿದ ಸುಮಾರು 12 ತಿಂಗಳವರೆಗೆ ಎದೆ ಹಾಲು ಉಣಿಸಿದ ನಂತರ ಮೃದುವಾದ ಬಟ್ಟೆಯಿಂದ ಒಸಡನ್ನು ಶುಚಿಗೊಳಿಸಬೇಕು. 12 ತಿಂಗಳಿಂದ 24 ನೇ ತಿಂಗಳವರೆಗೆ ಮಗುವಿನ ಗಾತ್ರದ ಅನುಸಾರ ಟೂತ್ ಬ್ರಷ್ ಅನ್ನು ಬಳಸಿ ದಿನಕ್ಕೆ ಎರಡು ಬಾರಿ ಹಲ್ಲನ್ನು ಸ್ವಚಗೊಳಿಸಬೇಕು. ನಂತರದ ದಿನದಲ್ಲಿ ಹಲ್ಲಿನ ಗಾತ್ರ ಅನುಸರಿಸಿ ಬಟನ್ ಟೂತ್ ಬ್ರಷ್ ಗಳನ್ನು ಉಪಗಿಸಬಹುದು ,ಪೋಷಕರು ಗಮನಿಸ ಬೇಕಾದಂತಹ ಮುಖ್ಯ ಅಂಶ ದಿನಕ್ಕೆ ಎರಡು ಬಾರಿ ಹಲ್ಲುಜ್ಜುವುದು ಮಕ್ಕಳಿಗೆ ದಿನಚರಿಯಂತೆ ಮಾಡುವುದು ಬಹಳ ಉತ್ತಮ ಹಲ್ಲುಜ್ಜುವುದು ಮತ್ತು ಬಾಯಿ ಮುಕ್ಕಳಿಸುವುದು  ಹಲ್ಲುಗಳ ಎಲ್ಲಾ ಮೇಲ್ಮೈಗಳಲ್ಲಿ ಹಲ್ಲುಜ್ಜುವುದು ಉತ್ತಮ ಅಭ್ಯಾಸ. ಹಲ್ಲುಜ್ಜಲು ತೆಗೆದುಕೊಳ್ಳುವ ಸಮಯವು ಮೇಲಿನ ಮತ್ತು ಕೆಳಗಿನ ಹಲ್ಲುಗಳಿಗೆ ಕನಿಷ್ಠ ಎರಡು ನಿಮಿಷಗಳವರೆಗೆ ಇರಬೇಕು.

೬೦ ವರ್ಷಗಳ ಬಳಿಕ ಲೋಗೋ ಬದಲಾಯಿಸಲಿದೆ NOKIA: ಹೇಗಿರಲಿದೆ ಹೊಸ ರೂಪ?

Image
 ೬೦ ವರ್ಷಗಳ ಬಳಿಕ ಲೋಗೋ ಬದಲಾಯಿಸಲಿದೆ NOKIA: ಹೇಗಿರಲಿದೆ ಹೊಸ ರೂಪ? ನೋಕಿಯಾ ಯಾರಿಗೆ ಗೊತ್ತಿಲ್ಲ ಈ ಬ್ರಾಂಡ್? ಮೊಬೈಲ್ ಅಂದ ತಕ್ಷಣ ನಮಗೆ ನೆನಪಾಗೋದೇ ನೋಕಿಯಾ ಬ್ರಾಂಡ್. ಅದರ ಲೋಗೋ, ಅದರ ಅಕ್ಷರಗಳು ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ. ಆದ್ರೆ ೬೦ ವರ್ಷಗಳ ಬಳಿಕ ಈಗ ನೋಕಿಯಾ ತನ್ನ ಲೋಗೋವನ್ನು ಬದಲಾಯಿಸುವ ನಿರ್ಧಾರ ಮಾಡಿದೆ. ಪ್ರಸಿದ್ಧ ಟೆಲಿಕಾಮ್ ಸಾಧನ ಉತ್ಪಾದಕ ಸಂಸ್ಥೆ ಇದೀಗ ಹೊಸ ರೂಪ, ಹೊಸ ಆಲೋಚನೆಗಳೊಂದಿಗೆ ಮಾರುಕಟ್ಟೆಗೆ ಬರಲಿದೆ. ಹೊಸ NOKIA ಲೋಗೋದಲ್ಲಿ ಪ್ರತಿಯೊಂದು ಅಕ್ಷರ ಸಹಿತ ವಿಭಿನ್ನ ರೂಪದಲ್ಲಿರಲಿದೆ. . ಮಾರುಕಟ್ಟೆಯಲ್ಲಿ ಜನರ ಮನಸ್ಸನ್ನ ಸೆಳೆಯುವ ವಿಶಿಷ್ಟ ಆಕಾರ ಹೊಂದಿದೆ. ಈ ಹಿಂದೆ ಸ್ಮಾರ್ಟ್ ಫೋನ್ ಗಳಿಗೆ ಸಂಬಂದಿಸಿದ ನಮ್ಮ ಸಂಸ್ಥೆ ಇಂದು ವ್ಯಾಪಾರ ತಂತ್ರಜ್ಞಾನ ಸಂಸ್ಥೆ ಆಗಿದೆ. 2020ರ ಬಳಿಕ ಮರುಹೊಂದಿಕೆ, ವೇಗವರ್ಧನ ಮತ್ತು ಪ್ರಮಾಣ ಹೀಗೆ.. ಮೂರು ಕಾರ್ಯತಂತ್ರವನ್ನು ನಾವು ಇರಿಸಿಕೊಂಡಿದ್ದೇವು. ನಮ್ಮ ಕಂಪೆನಿ ಹೊಸ ಧ್ಯೇಯ, ಹೊಸ ರೂಪ ಹಾಗೂ ಹೊಸ ಗುರಿಯೊಂದಿಗೆ ಮಾರುಕಟ್ಟೆಗೆ ಬರಲಿದೆ.  ಇದೀಗ ಮರುಹೊಂದಿಸುವ ಹಂತ ಮುಗಿದಿದೆ ಎಂದು  Nokia ದ ಸಿಇಓ ಪೆಕ್ಕಾ ಲುಂಡ್ಮಾರ್ಕ್ ಹೇಳಿದ್ದಾರೆ. ನೆಟ್ವರ್ಕಿಂಗ್ ತಂತ್ರಜ್ಞಾನದಲ್ಲಿ ನೋಕಿಯಾ ತನ್ನ ನಾಯಕತ್ವ ವನ್ನು ಪ್ರತಿಪಾದಿಸುವ ಸಮಯ ಬಂದಿದೆ.  ಇದು ಹಿಂದಿನ ಲೋಗೋದ ಪರಂಪರೆಯ ಆಧಾರವಾಗಿ ಇಟ್ಟುಕೊಂಡು  ಹೊಸ ಲೋಗೋದಲ್ಲಿ ನಮ್ಮ ಹೊಸತನವನ್ನು ಪ್ರತಿಬಿಂಬಿಸಲಿದ

ನಿಮ್ಮ ಅಂಗೈಗಳು ಬೆವರುತ್ತಿವೆಯಾ ,ಹಾಗಾದರೆ ಪರಿಹಾರ ಇಲ್ಲಿದೆ ನೋಡಿ

Image
 ನಿಮ್ಮ ಅಂಗೈಗಳು ಬೆವರುತ್ತಿವೆಯಾ ,ಹಾಗಾದರೆ ಪರಿಹಾರ ಇಲ್ಲಿದೆ ನೋಡಿ ಆತಂಕ, ಒತ್ತಡ ಮತ್ತು ಹೆದರಿಕೆ ಮತ್ತು ಯಾವುದೋ ಕಾರ್ಯಕ್ರಮದಲ್ಲಿ ಮಾತನಾಡುವಾಗ ನಿಮ್ಮ ಅಂಗೈಗಳು  ಬೆವರುವುದು ನೀವು ಗಮನಿಸರಬಹುದು ,ಒತ್ತಡ ಆತಂಕ ಮತ್ತು ಹೆದರುವಿಕೆ ಉಂಟಾದಾಗ ದೇಹದ ಹಾರ್ಮೋನುಗಳು ಕ್ರಿಯೆ ಪ್ರತಿಕ್ರಿಯೆಯ ಸಂದರ್ಭದಲ್ಲಿ ಕಾರ್ಟಿಸೋಲ್ ಮತ್ತು ಎಪಿನ್ಫ್ರಿನ್ ಅನ್ನು ಬಿಡುಗಡೆ ಮಾಡುತ್ತದೆ ಈ ಹಾರ್ಮೋನುಗಳು ನಿಮ್ಮ ದೇಹದ ಉಷ್ಣತೆಯನ್ನು ಹೆಚ್ಚಿಸುತ್ತವೆ. ಸಹಜವಾಗಿ, ನಿಮ್ಮ ದೇಹವು ನಿಮ್ಮ ತಾಪಮಾನವನ್ನು ನಿಯಂತ್ರಿಸುವ ಸಲುವಾಗಿ ಬೆವರನ್ನು ಹೊರ ಹಾಕುತ್ತದೆ . ಹಾಗಾದರೆ ಬೆವರುವ ಅಂಗೈಗಳಿಗೆ ಪರಿಹಾರವೇನು?   ಬೆವರುವ ಅಂಗೈಗಳಿಗೆ ಪರಿಪೂರ್ಣ ಚಿಕಿತ್ಸೆ ಇಲ್ಲದಿದ್ದರೂ ಅದನ್ನು ನಿಯಂತ್ರಣ ಮಾಡಲು ಕೆಲವೊಂದು ಸಲಹೆಗಳು ಇಲ್ಲಿವೆ ನೋಡಿ  •ಆಂಟಿಪೆರ್ಸ್ಪಿರಂಟ್ ಲೋಷನ್  ಆಂಟಿಪೆರ್ಸ್ಪಿರಂಟ್   ಬೆವರುವಿಕೆಯನ್ನು ನಿಯಂತ್ರಿಸಲು ಸುಲಭವಾದ ಮಾರ್ಗವಾಗಿದೆ. ಇದು ನಾನಾ ರೀತಿ ಮಾರುಕಟ್ಟೆಯಲ್ಲಿ ಲಭ್ಯವಿದ್ದು ಲೋಷನ್ಗಳನ್ನೂ ಹಚ್ಚುವುದು ಹೆಚ್ಚು ಪರಿಣಾಮಕಾರಿಯಾಗಿದೆ ಇದನ್ನು ಬಳಸುವುದರಿಂದ ನೀವು ತಕ್ಕ ಮಟ್ಟಿಗೆ ಅಂಗೈ ಬೆವರುವಿಕೆಯಿಂದ ದೂರವಿರಬಹುದು. •ಬೇಬಿ ಪೌಡರ್ ಬೇಬಿ ಪೌಡರ್ ದ್ರವವನ್ನು ಹೀರಿಕೊಳ್ಳುವ ಗುಣವನ್ನು ಹೊಂದಿದೆ ಆದ್ದರಿಂದ ಯಾವುದಾದರೂ ಕಾರ್ಯಕ್ರಮದ ಮೊದಲು ನೀವು ಇದನ್ನು ಬಳಸಿದರೆ ಬೆವರನ್ನು ತಡೆಯಬಹುದು   ಇದಕ್ಕಾಗಿ ನೀವು ಚಿಕ್ಕ ಗಾತ್ರದ ಬಾಟಲಿಯಲ್ಲ

ತಾಟು ನುಂಗು ‘ಐಸ್‌ ಆಪಲ್‌’ ತಿಂದ್ರೆ ಕೂದಲು ಸೊಂಪಾಗಿ ಬೆಳೆಯುತ್ತೆ ಗೊತ್ತಾ?

Image
ತಾಟು ನುಂಗು ‘ಐಸ್‌ ಆಪಲ್‌’ ತಿಂದ್ರೆ ಕೂದಲು ಸೊಂಪಾಗಿ ಬೆಳೆಯುತ್ತೆ ಗೊತ್ತಾ?  ಉರಿಯುವ ಬಿಸಿಲಿಗೆ ತಂಪು ತಂಪಾಗಿರುವ ಹಣ್ಣು ಸಿಕ್ಕರೆ ಸ್ವರ್ಗಕ್ಕೆ ಮೂರೇ ಗೇಣು. ಅಂಥಾ ಒಂದು ಖುಷಿಯನ್ನು ಕೊಡುವ ಹಣ್ಣು ಅಂದ್ರೆ ಅದು ತಾಟಿ ನುಂಗು. ಇದನ್ನು ತಾಟೆ ನುಂಗು ಅಂತಲೂ ಕರೀತಾರೆ. ತುಳುವಿನಲ್ಲಿ ಈ ಹಣ್ಣನ್ನು ಈರೋಲ್‌ ಅಂತಾರೆ. ಇಂಗ್ಲಿಷ್‌ನಲ್ಲಿ ಐಸ್‌ ಆಪಲ್‌ ಅಂತ ಕರೀತಾರೆ ಗೊತ್ತಾ? ಇನ್ನು ತಮಿಳಿನಲ್ಲಿ ನುಂಗು ಮತ್ತು ತೆಲುಗುದಲ್ಲಿ ತಾತಿಮುಂಜೆಲು ಅಂತ ಕರೆಯುತ್ತಾರೆ.  ಈ ಹಣ್ಣು ಕರುನಾಡಿನ ಕರಾವಳಿ ಭಾಗದಲ್ಲಿ, ತಮಿಳುನಾಡಿನಲ್ಲಿ ಮತ್ತು ಆಂಧ್ರಪ್ರದೇಶದಲ್ಲಿ ಹೆಚ್ಚಾಗಿ ಬೆಳೆಯುತ್ತೆ. ತೆಂಗಿನ ಮರದಂತೆ ಎತ್ತರಕ್ಕೆ ಬೆಳೆಯುವ ಈ ಮರ ಹೆಚ್ಚಿನವರಿಗೆ ಚಿರಪರಿಚಿತ. ಅದ್ರಲ್ಲೂ ಬೇಸಿಗೆ ಬಂತೆಂದರೆ ರಸ್ತೆ ಬದಿಗಳಲ್ಲಿ ಈ ಹಣ್ಣನ್ನು ಮಾರುತ್ತಿರುತ್ತಾರೆ. ಮೃದುವಾಗಿ, ತಂಪಾದ ನೀರಿನ ತಿರುಳನ್ನು ಹೊಂದಿರುವ ಈ ತಾಟಿನುಂಗು ತಿನ್ನಲು ತುಂಬಾನೇ ಮಜಾವಾಗಿರುತ್ತೆ, ಈ ಹಣ್ಣು ಆರೋಗ್ಯಕ್ಕೆ ಪೂರಕವಾದ ಅನೇಕ ಅಂಶಗಳನ್ನು ಹೊಂದಿದ. ಅವು ಯಾವುವು ಅಂತ ನೋಡೋಣ ಬನ್ನಿ. ಈ ಹಣ್ಣಿನ ವಿಶೇಷತೆಗಳೇನು ?   ತಾಟಿ ನುಂಗಲ್ಲಿ ಜೀವಸತ್ವಗಳು, ಖನಿಜಗಳು, ಕ್ಯಾಲ್ಸಿಯಂ, ಫೈಟೊನ್ಯೂಟ್ರಿಯೆಂಟ್‌ಗಳು ಮತ್ತು ಕಾರ್ಬೋಹೈಡ್ರೇಟ್‌ ಸಾಕಷ್ಟು ಪ್ರಮಾಣದಲ್ಲಿದೆ. ಅಲ್ಲದೆ, ಈ ಕಡಿಮೆ ಕ್ಯಾಲೋರಿ ಹಣ್ಣಿನಲ್ಲಿ ಫೈಬರ್, ಪ್ರೋಟೀನ್, ವಿಟಮಿನ್ ಎ, ಸಿ, ಇ ಮತ್ತು ಕೆ, ಕಬ್ಬಿಣ, ಸತು, ರಂಜಕ

ಊಟವಾದ ನಂತರ ಸಿಗರೇಟ್ ಸೇದುತ್ತಿದ್ದೀರಾ ಹಾಗಾದ್ರೆ ಈಗಲೇ ನಿಲ್ಲಿಸಿ !

Image
 ಊಟವಾದ ನಂತರ ಸಿಗರೇಟ್ ಸೇದುತ್ತಿದ್ದೀರಾ ಹಾಗಾದ್ರೆ ಈಗಲೇ ನಿಲ್ಲಿಸಿ ! ಊಟವಾದ ನಂತರ ಹಲವರಿಗೆ ಹಲವಾರು ಅಭ್ಯಾಸಗಳಿರುತ್ತವೆ. ಕೆಲವರಿಗೆ ಚಹಾ ಸವಿಯುವುದು, ಸಿಗರೇಟ್ ಸೇದುವುದು ಅಲ್ಲದೆ, ಮಲಗುವ ಅಭ್ಯಾಸ ಕೂಡ ಇರುತ್ತದೆ. ಇದರಿಂದ ಏನೆಲ್ಲ ತೊಂದರೆಗಳಾಗುತ್ತವೆ ನಿಮಗೆ ಗೊತ್ತಾ? ಊಟ ಆದ ತಕ್ಷಣ ಸಿಗರೇಟ್ ಸೇದಲೇ ಬೇಡಿ ಊಟ ಆದ ತಕ್ಷಣ ಸಿಗರೇಟ್ ಸೇದುವುದರಿಂದ ಹಲವಾರು ಅನಾರೋಗ್ಯ ಕಾಡಬಹುದು ಯಾಕೆಂದರೆ ಅದರಲ್ಲಿರುವ ನಿಕೋಟಿನ್ ಅಂಶವು ನೇರವಾಗಿ ದೇಹದ ಮೇಲೆ ಪರಿಣಾಮ ಬೀರುತ್ತದೆ. ಊಟವಾದ ತಕ್ಷಣ ಸಿಗರೇಟ್ ಸೇದುವುದು 10 ಸಿಗರೇಟ್ ಸೇದುವುದಕ್ಕೆ ಸಮ ಎನ್ನಲಾಗುತ್ತದೆ ಊಟದ ನಂತ್ರ ಚಹಾ ಕುಡಿಯುವುದು ಕೆಟ್ಟ ಅಭ್ಯಾಸ   ಹಲವರು ಊಟದ ಬಳಿಕ ಚಹಾ ಕುಡಿಯೋ ಅಭ್ಯಾಸವನ್ನು ರೂಡಿಸಿಕೊಂಡಿರುತ್ತಾರೆ. ಆದರೆ ಚಹಾದಲ್ಲಿರುವ ಕೆಫಿನ್ ಜೀರ್ಣಕ್ರಿಯೆಗೆ ಅಡ್ಡಿಯನ್ನುಂಟು ಮಾಡುತ್ತದೆ. ಅಲ್ಲದೆ ಆಹಾರದಲ್ಲಿನ ಪ್ರೋಟಿನ್ ಅಂಶವನ್ನು ನಾಶಮಾಡುತ್ತದೆ ಜೊತೆಗೆ ಕಬ್ಬಿನಾಂಶವನ್ನು ಹೀರಿಕೊಳ್ಳುತ್ತದೆ ಆದ್ದರಿಂದ ಊಟವಾದ ತಕ್ಷಣ ಚಹಾ ಕುಡಿಯುವ ಅಭ್ಯಾಸ ಬಿಡುವುದು ಉತ್ತಮ. ಊಟದ ನಂತ್ರ ನಿದ್ರೆ ಮಾಡ್ಬೇಡಿ  ಊಟವಾದ ತಕ್ಷಣ ನಿದ್ರೆ ಮಾಡುವುದು ಹಲವರಿಗೆ ಮನಸ್ಸಿನ ಉಲ್ಲಾಸ ಮುದ ನೀಡುತ್ತದೆ ಎಂಬ ಕಲ್ಪನೆ ಇದೆ  ಆದರೆ ಇದು ಜೀರ್ಣಕ್ರಿಯೆಗೆ ಅಡ್ಡಿಯನ್ನುಂಟು ಮಾಡುತ್ತದೆ. ಆಹಾರ ಕರಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಹಾಗಾಗಿ ಹೊಟ್ಟೆ ತುಂಬಾ ತಿಂದ ತಕ್ಷಣ ನಿದ್ದೆ ಮಾಡುವುದರ