೬೦ ವರ್ಷಗಳ ಬಳಿಕ ಲೋಗೋ ಬದಲಾಯಿಸಲಿದೆ NOKIA: ಹೇಗಿರಲಿದೆ ಹೊಸ ರೂಪ?

 ೬೦ ವರ್ಷಗಳ ಬಳಿಕ ಲೋಗೋ ಬದಲಾಯಿಸಲಿದೆ NOKIA: ಹೇಗಿರಲಿದೆ ಹೊಸ ರೂಪ?


ನೋಕಿಯಾ ಯಾರಿಗೆ ಗೊತ್ತಿಲ್ಲ ಈ ಬ್ರಾಂಡ್? ಮೊಬೈಲ್ ಅಂದ ತಕ್ಷಣ ನಮಗೆ ನೆನಪಾಗೋದೇ ನೋಕಿಯಾ ಬ್ರಾಂಡ್. ಅದರ ಲೋಗೋ, ಅದರ ಅಕ್ಷರಗಳು ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ. ಆದ್ರೆ ೬೦ ವರ್ಷಗಳ ಬಳಿಕ ಈಗ ನೋಕಿಯಾ ತನ್ನ ಲೋಗೋವನ್ನು ಬದಲಾಯಿಸುವ ನಿರ್ಧಾರ ಮಾಡಿದೆ. ಪ್ರಸಿದ್ಧ ಟೆಲಿಕಾಮ್ ಸಾಧನ ಉತ್ಪಾದಕ ಸಂಸ್ಥೆ ಇದೀಗ ಹೊಸ ರೂಪ, ಹೊಸ ಆಲೋಚನೆಗಳೊಂದಿಗೆ ಮಾರುಕಟ್ಟೆಗೆ ಬರಲಿದೆ.

ಹೊಸ NOKIA ಲೋಗೋದಲ್ಲಿ ಪ್ರತಿಯೊಂದು ಅಕ್ಷರ ಸಹಿತ ವಿಭಿನ್ನ ರೂಪದಲ್ಲಿರಲಿದೆ. . ಮಾರುಕಟ್ಟೆಯಲ್ಲಿ ಜನರ ಮನಸ್ಸನ್ನ ಸೆಳೆಯುವ ವಿಶಿಷ್ಟ ಆಕಾರ ಹೊಂದಿದೆ. ಈ ಹಿಂದೆ ಸ್ಮಾರ್ಟ್ ಫೋನ್ ಗಳಿಗೆ ಸಂಬಂದಿಸಿದ ನಮ್ಮ ಸಂಸ್ಥೆ ಇಂದು ವ್ಯಾಪಾರ ತಂತ್ರಜ್ಞಾನ ಸಂಸ್ಥೆ ಆಗಿದೆ. 2020ರ ಬಳಿಕ ಮರುಹೊಂದಿಕೆ, ವೇಗವರ್ಧನ ಮತ್ತು ಪ್ರಮಾಣ ಹೀಗೆ.. ಮೂರು ಕಾರ್ಯತಂತ್ರವನ್ನು ನಾವು ಇರಿಸಿಕೊಂಡಿದ್ದೇವು. ನಮ್ಮ ಕಂಪೆನಿ ಹೊಸ ಧ್ಯೇಯ, ಹೊಸ ರೂಪ ಹಾಗೂ ಹೊಸ ಗುರಿಯೊಂದಿಗೆ ಮಾರುಕಟ್ಟೆಗೆ ಬರಲಿದೆ.  ಇದೀಗ ಮರುಹೊಂದಿಸುವ ಹಂತ ಮುಗಿದಿದೆ ಎಂದು  Nokia ದ ಸಿಇಓ ಪೆಕ್ಕಾ ಲುಂಡ್ಮಾರ್ಕ್ ಹೇಳಿದ್ದಾರೆ.



ನೆಟ್ವರ್ಕಿಂಗ್ ತಂತ್ರಜ್ಞಾನದಲ್ಲಿ ನೋಕಿಯಾ ತನ್ನ ನಾಯಕತ್ವ ವನ್ನು ಪ್ರತಿಪಾದಿಸುವ ಸಮಯ ಬಂದಿದೆ.  ಇದು ಹಿಂದಿನ ಲೋಗೋದ ಪರಂಪರೆಯ ಆಧಾರವಾಗಿ ಇಟ್ಟುಕೊಂಡು  ಹೊಸ ಲೋಗೋದಲ್ಲಿ ನಮ್ಮ ಹೊಸತನವನ್ನು ಪ್ರತಿಬಿಂಬಿಸಲಿದೆ. ಡಿಜಿಟಲ್ ಯುಗಕ್ಕೆ ಹೊಂದುವ ಅಪೂರ್ವವಾದ ಡಿಸೈನ್ನೊಂದಿಗೆ ನೋಕಿಯಾ ಹೊಸ ರೂಪದಲ್ಲಿ ಕಾಣಿಸಿಕೊಳ್ಳಲಿದೆ. ವನೋಕಿಯಾದ ಈ ಹೊಸ ರೂಪ ಮತ್ತೆ ಹೊಸ ಇತಿಹಾಸ ಸೃಷ್ಟಿಸಲಿದೆ. ಜನಮಾನಸದಲ್ಲಿ ಅಚ್ಚಳಿಯಂದAಥಾ ಹೆಜ್ಜೆಗುರುತನ್ನು ಮೂಡಿಸಲಿದೆ ಎಂದು


ಒಟ್ಟಾರೆಯಾಗಿ ನೋಕಿಯಾ ಇನ್ಮುಂದೆ ಮಾರುಕಟ್ಟೆಯಲ್ಲಿ ತನ್ನದೇ ಸದ್ದು ಮಾಡುವ ಸ್ಪರ್ಧಾತ್ಮಕ ಪೈಪೋಟಿಗೆ ತನ್ನ ಶೈಲಿಯನ್ನೇ ಬದಲಿಸಿದ್ದು ಆಕರ್ಷನಿಯ ವಾಗಿ ಮಾರುಕಟ್ಟೆಯಲ್ಲಿ ಮಿಂಚಿನ ಸಂಚಲನ ಮೂಡಿಸಲಿದೆ ಈ ಬದಲಾವಣೆಯ ಮೂಲಕ ಎಲ್ಲರ ಗಮನ ಸೆಳೆಯಲಿದೆ ಎಂದು  Nokia ದ ಸಿಇಓ ಪೆಕ್ಕಾ ಲುಂಡ್ಮಾರ್ಕ್ ಹೇಳಿದ್ದಾರೆ.


Comments

Popular posts from this blog

ಮಾನವನ ಆರೋಗ್ಯ ಸಂಜೀವಿನಿ – ‘ಸ್ಪಿರುಲಿನಾ’ Health Benefits of Spirulina

ಸ್ಟಾರ್‌ ಫ್ರೂಟ್‌ ತಿನ್ನಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ Benefifs of Star Fruit

‘ಕಾರ್ನ್ ಸಿಲ್ಕ್’ ಜೋಳದ ಕೂದಲನ್ನು ಬಿಸಾಡುವ ಮುನ್ನ ಈ ವರದಿ ಓದಿ