Posts

Showing posts from August, 2022

`ಸೃಷ್ಟಿ ಮೀಡಿಯಾ ಅಕಾಡೆಮಿ'

Image
  ` ಸೃಷ್ಟಿ ಮೀಡಿಯಾ ಅಕಾಡೆಮಿ ' ಸೃಷ್ಟಿ ಫೌಂಡೇಷನ್ ಸಂಸ್ಥೆಯ ಕನಸಿನ ಕೂಸು . ಮಾಧ್ಯಮ ಲೋಕದಲ್ಲಿ ಹೊಸತನ ಮೂಡಿಸಬೇಕು . ಕನ್ನಡ ಪತ್ರಿಕೋದ್ಯಮಕ್ಕೆ ಕೌಶಲ್ಯ ಭರಿತ , ವೃತ್ತಿಪರ , ಪ್ರಾಮಾಣಿಕ ಪತ್ರಕರ್ತರನ್ನು ಕೊಡುಗೆಯಾಗಿ ನೀಡಬೇಕು ಅನ್ನೋ ಘನ ಉದ್ದೇಶದಿಂದ ಈ ಸಂಸ್ಥೆಯನ್ನು ಸ್ಥಾಪಿಸಲಾಗಿದೆ . ಜನರಲ್ಲಿ ಪತ್ರಿಕೋದ್ಯಮದ ಬಗ್ಗೆ ವಿಶ್ವಾಸಾರ್ಹತೆ ಹೆಚ್ಚಿಸಬೇಕು ಅನ್ನೋ ಏಕೈಕ ಉದ್ದೇಶದಿಂದ ಕನ್ನಡ ಪತ್ರಿಕೋದ್ಯಮದಲ್ಲಿ ಹೊಸ ಮೈಲಿಗಲ್ಲನ್ನೇ ಸ್ಥಾಪಿಸಿ , ತನಿಖಾ ಪತ್ರಿಕೋದ್ಯಮದಲ್ಲಿ ತಮ್ಮದೇ ಛಾಪು ಮೂಡಿಸಿ , ರಾಷ್ಟ್ರೀಯ ಹಾಗೂ   ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿಯನ್ನು ಗಳಿಸಿರುವ ಶ್ರೀಮತಿ ವಿಜಯಲಕ್ಷ್ಮಿ ಶಿಬರೂರು ಅವರ ನೇತೃತ್ವದಲ್ಲಿ ಸೃಷ್ಟಿ ಮೀಡಿಯಾ ಅಕಾಡೆಮಿ ನಡೆಯನ್ನು ಆರಂಭಿಸಲಾಗಿದೆ . ಶಿಬರೂರು ಅವರ ಜೊತೆ ಕನ್ನಡ ಮಾತ್ರವಲ್ಲ ಆಂಗ್ಲ ಮಾಧ್ಯಮದ ದಿಗ್ಗಜರೂ ಕೈಜೋಡಿಸಿ ತಮ್ಮ ಅನುಭವಾಮೃತವನ್ನು ವಿದ್ಯಾರ್ಥಿಗಳಿಗೆ ಧಾರೆ ಎರೆಯುತ್ತಿದ್ದಾರೆ .      ಮಾಧ್ಯಮಕ್ಕೆ ಹೊಸತನದ ಜೊತೆಗೆ ಬದಲಾವಣೆ ತರುವುದೇ ನಮ್ಮ ಗುರಿ :  ಮಾಧ್ಯಮ ಕ್ಷೇತ್ರ ರಾಕೆಟ್ ವೇಗದಲ್ಲಿ ಬೆಳೆಯುತ್ತಿದೆ . ಈ ಡಿಜಿಟಲ್ ಯುಗದಲ್ಲಿ ಹೊಸ ಹೊಸ ತಂತ್ರಜ್ಞಾನಗಳು ಆವಿಷ್ಕಾರಗೊಳ್ಳುತ್ತಿವೆ . ಒಂದು ತಂತ್ರಜ್ಞಾನ ಕಲಿಯೋದಕ್ಕೆ ಮುನ್ನವೇ ಮತ್ತೊಂದು ಹಳೆಯದಾಗುತ್ತಿದೆ