`ಸೃಷ್ಟಿ ಮೀಡಿಯಾ ಅಕಾಡೆಮಿ'

 `ಸೃಷ್ಟಿ ಮೀಡಿಯಾ ಅಕಾಡೆಮಿ' ಸೃಷ್ಟಿ ಫೌಂಡೇಷನ್ ಸಂಸ್ಥೆಯ ಕನಸಿನ ಕೂಸು. ಮಾಧ್ಯಮ ಲೋಕದಲ್ಲಿ ಹೊಸತನ ಮೂಡಿಸಬೇಕು. ಕನ್ನಡ ಪತ್ರಿಕೋದ್ಯಮಕ್ಕೆ ಕೌಶಲ್ಯ ಭರಿತ, ವೃತ್ತಿಪರ, ಪ್ರಾಮಾಣಿಕ ಪತ್ರಕರ್ತರನ್ನು ಕೊಡುಗೆಯಾಗಿ ನೀಡಬೇಕು ಅನ್ನೋ ಘನ ಉದ್ದೇಶದಿಂದ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಜನರಲ್ಲಿ ಪತ್ರಿಕೋದ್ಯಮದ ಬಗ್ಗೆ ವಿಶ್ವಾಸಾರ್ಹತೆ ಹೆಚ್ಚಿಸಬೇಕು ಅನ್ನೋ ಏಕೈಕ ಉದ್ದೇಶದಿಂದ ಕನ್ನಡ ಪತ್ರಿಕೋದ್ಯಮದಲ್ಲಿ ಹೊಸ ಮೈಲಿಗಲ್ಲನ್ನೇ ಸ್ಥಾಪಿಸಿ, ತನಿಖಾ ಪತ್ರಿಕೋದ್ಯಮದಲ್ಲಿ ತಮ್ಮದೇ ಛಾಪು ಮೂಡಿಸಿ, ರಾಷ್ಟ್ರೀಯ ಹಾಗೂ  ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿಯನ್ನು ಗಳಿಸಿರುವ ಶ್ರೀಮತಿ ವಿಜಯಲಕ್ಷ್ಮಿ ಶಿಬರೂರು ಅವರ ನೇತೃತ್ವದಲ್ಲಿ ಸೃಷ್ಟಿ ಮೀಡಿಯಾ ಅಕಾಡೆಮಿ ನಡೆಯನ್ನು ಆರಂಭಿಸಲಾಗಿದೆ. ಶಿಬರೂರು ಅವರ ಜೊತೆ ಕನ್ನಡ ಮಾತ್ರವಲ್ಲ ಆಂಗ್ಲ ಮಾಧ್ಯಮದ ದಿಗ್ಗಜರೂ ಕೈಜೋಡಿಸಿ ತಮ್ಮ ಅನುಭವಾಮೃತವನ್ನು ವಿದ್ಯಾರ್ಥಿಗಳಿಗೆ ಧಾರೆ ಎರೆಯುತ್ತಿದ್ದಾರೆ.

    ಮಾಧ್ಯಮಕ್ಕೆ ಹೊಸತನದ ಜೊತೆಗೆ ಬದಲಾವಣೆ ತರುವುದೇ ನಮ್ಮ ಗುರಿಮಾಧ್ಯಮ ಕ್ಷೇತ್ರ ರಾಕೆಟ್ ವೇಗದಲ್ಲಿ ಬೆಳೆಯುತ್ತಿದೆ. ಡಿಜಿಟಲ್ ಯುಗದಲ್ಲಿ ಹೊಸ ಹೊಸ ತಂತ್ರಜ್ಞಾನಗಳು ಆವಿಷ್ಕಾರಗೊಳ್ಳುತ್ತಿವೆ. ಒಂದು ತಂತ್ರಜ್ಞಾನ ಕಲಿಯೋದಕ್ಕೆ ಮುನ್ನವೇ ಮತ್ತೊಂದು ಹಳೆಯದಾಗುತ್ತಿದೆ. ಇಂಥಾ ವೇಗದ ಬೆಳವಣಿಗೆಗೆ ಪೂರಕವಾಗಿ ಪತ್ರಕರ್ತರೂ ಕೌಶಲ್ಯವನ್ನು ರೂಢಿಸಿಕೊಳ್ಳಬೇಕಾಗಿದೆ. ಹೊಸ ಹೊಸ ತಂತ್ರಜ್ಞಾನದ ಜ್ಞಾನವುಳ್ಳ ವೃತ್ತಿಪರ ಪತ್ರಕರ್ತರು ಕ್ಷೇತ್ರಕ್ಕೆ ಕಾಲಿಡಬೇಕಾಗಿದೆ. ಅದಕ್ಕೆ ತಕ್ಕುದಾದ ತರಬೇತಿಯನ್ನು ನೀಡುವ ಉದ್ದೇಶದಿಂದಲೇ ನಾವುಸೃಷ್ಟಿ ಮೀಡಿಯಾ ಅಕಾಡೆಮಿಯನ್ನು ಸ್ಥಾಪಿಸಿರುವುದು. ಹೊಸ ಯುಗದ ಬೇಡಿಕೆಗೆ ಅನುಗುಣವಾಗಿ ಡಿಜಿಟಲ್ ಮೀಡಿಯಾ, ಆಂಕರಿಂಗ್, ರಿಪೋರ್ಟಿಂಗ್, ತನಿಖಾ ವರದಿಗಾರಿಕೆ, ಪಾಡ್ಕಾಸ್ಟಿಂಗ್, ಕಂಟೆಂಟ್ ರೈಟಿಂಗ್, ವಿಡಿಯೋ ಜರ್ನಲಿಸಂ, ಮೊಬೈಲ್ ಜರ್ನಲಿಸಂ ಮುಂತಾದ ವಿಷಯಗಳನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಅತ್ಯಂತ ಪರಿಣಾಮಕಾರಿಯಾಗಿ, ಪ್ರಾಯೋಗಿಕ ತರಬೇತಿಗೆ ಹೆಚ್ಚಿನ ಒತ್ತುಕೊಟ್ಟು ಕಲಿಸುತ್ತಿದೆ.

                     




Comments

Popular posts from this blog

ಮಾನವನ ಆರೋಗ್ಯ ಸಂಜೀವಿನಿ – ‘ಸ್ಪಿರುಲಿನಾ’ Health Benefits of Spirulina

ಸ್ಟಾರ್‌ ಫ್ರೂಟ್‌ ತಿನ್ನಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ Benefifs of Star Fruit

‘ಕಾರ್ನ್ ಸಿಲ್ಕ್’ ಜೋಳದ ಕೂದಲನ್ನು ಬಿಸಾಡುವ ಮುನ್ನ ಈ ವರದಿ ಓದಿ