ಸಂಗೀತವೂ ಒಂದು ಮದ್ದು : ಔಷಧವೂ ಭರಿಸಲಾಗದ ಗಾಯಗಳನ್ನು ಸಂಗೀತ ಗುಣಪಡಿಸುತ್ತದೆ

 ಸಂಗೀತವೂ ಒಂದು ಮದ್ದು : ಔಷಧವೂ ಭರಿಸಲಾಗದ ಗಾಯಗಳನ್ನು ಸಂಗೀತ ಗುಣಪಡಿಸುತ್ತದೆ


" Music can heal the wound, That medicine cannot touch " ಎಂದು " ವರ್ಸಸ್ ಆಫ್ ಹ್ಯಾಪಿನೆಸ್"ನ ಲೇಖಕ ಡೆಬಾಸಿಷ್ ಮ್ರಿದಾ ( Debasish Mridha) ಹೇಳಿದ್ದಾರೆ. ಇದರ ಅರ್ಥ  ಔಷಧವೂ ಭರಿಸಲಾಗದ ಗಾಯಗಳನ್ನು ಸಂಗೀತ ಗುಣಪಡಿಸುತ್ತದೆ ಎಂದು. ಹೌದು ಸಂಗೀತಕ್ಕೆ ಇಂತಹ ಒಂದು ಅದ್ಭುತ ಶಕ್ತಿ ಇದೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ.


ಹಾಗಿದ್ರೆ ಸಂಗೀತದಿಂದ ನಮಗಾಗುವ  ಆರೋಗ್ಯ ಪ್ರಯೋಜನಗಳು ಯಾವುವು ಎಂದು ತಿಳಿಯೋಣ ಬನ್ನಿ . 

ನೀವು ಯಾವಾಗಲೂ ಸಂಗೀತ ಕೇಳುತ್ತಾ ಇರುತ್ತೀರಾ? ಮ್ಯೂಸಿಕ್ ಅಂದ್ರೆ ನಿಮಗೆ ಅಷ್ಟೊಂದು ಇಷ್ಟನಾ..? ಒಂದುವೇಳೆ ನೀವು ಸಂಗೀತ ಕೇಳುವ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದರೆ ಖಂಡಿತ ನೀವು  ಸಂಗೀತದಿಂದಾಗುವ ಆರೋಗ್ಯದ ಲಾಭಗಳನ್ನು ಪಡೆಯುತ್ತಿದ್ದೀರಿ.


ಹೌದು ಸಂಗೀತಕ್ಕೂ - ಆರೋಗ್ಯಕ್ಕೂ ಅವಿನಾಭಾವ ಸಂಬಂಧವಿದೆ. ಯಾರು ಸಂಗೀತದೊಳಗಿನ ಭಾವವನ್ನು ಅರ್ಥೈಸಿಕೊಂಡು ಆಲಿಸುತ್ತಾರೋ ಅವರಿಗೆ ಸಂಗೀತದಿಂದಾಗುವ ಆರೋಗ್ಯ ಪ್ರಯೋಜನಗಳ ಅನುಭವವಾಗಿರುತ್ತದೆ.ಕೆಲವು ಹಾಡುಗಳನ್ನು ಅಥವಾ ಮ್ಯೂಸಿಕ್ ಅನ್ನು ಕೇಳಿದಾಗ ಬೇಸರದಲ್ಲಿದ್ದರೂ ಮನಸ್ಸಿಗೆ  ಸಮಾಧಾನ ಎನಿಸುತ್ತದೆಯಲ್ಲವೇ, ಅದಕ್ಕೆ ಕಾರಣವಿದೆ.


ಮೆದುಳು ಸಂಗೀತವನ್ನು ಸ್ವೀಕರಿಸುವ ರೀತಿ:

ನಮ್ಮ ಮೆದುಳು  ಕರ್ಕಶ ಶಬ್ದ‌ ಮತ್ತು  ಸುಮಧುರ ಶಬ್ದಗಳೆರಡನ್ನೂ  ಸ್ವೀಕರಿಸುವ ರೀತಿಯೇ‌ ಬೇರೆ‌ ಇರುತ್ತದೆ.ಇದರರ್ಥ ಮೆದುಳಿಗೆ ನಮ್ಮ ದೇಹಕ್ಕೆ , ನಮ್ಮ ಮನಸ್ಸಿಗೆ , ಮನಸ್ಥಿತಿಗೆ ಯಾವ ರೀತಿಯ ಶಬ್ದ ಉತ್ತಮ ಎಂದು ಗ್ರಹಿಸುವ ಶಕ್ತಿಯಿದೆ. ನಿಮಗೆ ತಿಳಿದಿರಬಹುದು ವೈದ್ಯರುಗಳು ಗರ್ಭಿಣಿಯರಿಗೆ ಒಳ್ಳೆಯ ಮಧುರವಾದ ಸಂಗೀತವನ್ನು ಕೇಳುತ್ತಿರಿ. ಕರ್ಕಶ ಧನಿಗಳಿಂದ ದೂರವಿರಿ ಎಂದು ಸಲಹೆ ನೀಡುತ್ತಾರೆ.ಇಲ್ಲೇ ತಿಳಿಯುತ್ತದೆ ಸಂಗೀತಕ್ಕೆ ಎಷ್ಟು ಸಾಮರ್ಥ್ಯ ,ಪ್ರಾಮುಖ್ಯತೆ ಇದೆಯೆಂದು. ನಮ್ಮ ಹುಟ್ಟು ಆರೋಗ್ಯಕರವಾಗಿರಲು ಉತ್ತಮ ಸಂಗೀತ ಆಲಿಸುವುದೂ ಒಂದು ಮಾರ್ಗವಾಗಿದೆ.


ಹಾಡುಕೇಳುವುದರಿಂದ ಮೆದುಳಿನಲ್ಲಿ ರಾಸಾಯನಿಕ ಬಿಡುಗಡೆ:- 

ಹೌದು, ಮನುಷ್ಯನ ಮೇಲೆ ಸಂಗೀತ ಬೀರುವ ಪ್ರಭಾವವನ್ನು ಇನ್ನು ಯಾರು ಸರಿಯಾಗಿ ಅರ್ಥಮಾಡಿಕೊಂಡಿಲ್ಲ.ಆದರೆ‌ ಅಧ್ಯಯನವೊಂದು ತಿಳಿಸಿದೆ‌ , ನಾವು ನಮ್ಮ ಮನಸ್ಸು ಇಷ್ಟಪಡುವ ಸಂಗೀತವನ್ನು ಕೇಳಿ ಆಹ್ಲಾದಿಸಿದಾಗ ನಮ್ಮ ಮೆದುಳಿನಲ್ಲಿ ಡೊಪಮೈನ್ ( Dopamine) ಎಂಬ ರಾಸಾಯನಿಕ ಬಿಡುಗಡೆಯಾಗಿ ನಮ್ಮ ಮನಸ್ಸನ್ನು ಧನಾತ್ಮಕವಾಗಿ ಚಿಂತಿಸುವಂತೆ ಪ್ರಚೋದಿಸುತ್ತದೆ.


ಮೆಲೋಡೀ ಮ್ಯೂಸಿಕ್ ಬೀರುವ ಪ್ರಭಾವ:- 

 ಮೆಲೋಡಿ ಮ್ಯೂಸಿಕ್ ಕೇಳಿದಾಗ  ಹಾರ್ಟ್ ರೇಟ್, ಉಸಿರಾಟದ ಪ್ರಕ್ರಿಯೆ ಸಕ್ರಿಯವಾಗಿ , ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಸಹಾಯಮಾಡುತ್ತದೆ. ಒಟ್ಟಾರೆಯಾಗಿ ಮಾನಸಿಕ ಆರೋಗ್ಯವನ್ನು ಕಾಪಾಡುವ ಅನೇಕ ಗುಣಲಕ್ಷಣಗಳು ಸಂಗೀತಕ್ಕಿವೆ ಎಂಬುದು ವೈಜ್ಞಾನಿಕ ಸತ್ಯವಾಗಿದೆ.ದೈನಂದಿನ ಜೀವನದಲ್ಲಿ ಸಂತೋಷ ಮತ್ತು ವಿಶ್ರಾಂತಿಯನ್ನು  ಸೃಷ್ಟಿಸುವ ಸಾಮರ್ಥ್ಯ ಸಂಗೀತಕ್ಕಿದೆ.


Gayatri M.N

Comments

Popular posts from this blog

ಮಾನವನ ಆರೋಗ್ಯ ಸಂಜೀವಿನಿ – ‘ಸ್ಪಿರುಲಿನಾ’ Health Benefits of Spirulina

ಸ್ಟಾರ್‌ ಫ್ರೂಟ್‌ ತಿನ್ನಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ Benefifs of Star Fruit

‘ಕಾರ್ನ್ ಸಿಲ್ಕ್’ ಜೋಳದ ಕೂದಲನ್ನು ಬಿಸಾಡುವ ಮುನ್ನ ಈ ವರದಿ ಓದಿ