ಹಲ್ಲು ಕುಳಿ ನಿರ್ಲಕ್ಷ್ಯ ಬೇಡ, ಜೀವನ ಪರ್ಯಂತ ಸಮಸ್ಯೆ ಕೊಡುತ್ತೆ ಎಚ್ಚರ !

ಹಲ್ಲು ಕುಳಿ ನಿರ್ಲಕ್ಷ್ಯ ಬೇಡ, ಜೀವನ ಪರ್ಯಂತ ಸಮಸ್ಯೆ ಕೊಡುತ್ತೆ ಎಚ್ಚರ ! ಹಲ್ಲಿನ ಆರೈಕೆ ಆರಂಭದ ಹಂತದಲ್ಲಿಯೇ ಮಾಡುತ್ತಾ ಬರಬೇಕಾಗುತ್ತದೆ .ಹಲ್ಲಿನ ಕೊಳೆತ ಅಥವಾ ಹಲ್ಲಿನ ಕುಳಿಗಳು ಮಕ್ಕಳಲ್ಲಿ ಕಾಣಿಸುವ ಸಮಸ್ಯೆಗಳಲ್ಲಿ ಒಂದಾಗಿದೆ . ಕುಳಿಗಳನ್ನು ಇತ್ತೀಚಿನ ಪೋಷಕರು ನಿರ್ಲಕ್ಷ್ಯ ಭಾವದಿಂದ ನೋಡುತ್ತಿದ್ದಾರೆ ಆದರೆ ಅದು ತಪ್ಪು ಹಲ್ಲಿನ ಕುಳಿ ಕೊಳೆತವಾಗಿ ಮಾರ್ಪಟ್ಟು ಶಾಶ್ವತ ಹಲ್ಲಿನ ಸಮಸ್ಯೆಗೆ ಕಾರಣವಾಗಬಹುದು . ಹಲ್ಲುಗಳನ್ನು ಆರೋಗ್ಯವಾಗಿಡಲು ಕೆಲವೊಂದು ಉತ್ತಮ ಮಾರ್ಗಗಳನ್ನು ಅನುಸರಿಸಬೇಕು ಮಕ್ಕಳಲ್ಲಿನ ಹಲ್ಲಿನ ಆರೈಕೆ ಮಗು ಜನಿಸಿದ ಸುಮಾರು 12 ತಿಂಗಳವರೆಗೆ ಎದೆ ಹಾಲು ಉಣಿಸಿದ ನಂತರ ಮೃದುವಾದ ಬಟ್ಟೆಯಿಂದ ಒಸಡನ್ನು ಶುಚಿಗೊಳಿಸಬೇಕು. 12 ತಿಂಗಳಿಂದ 24 ನೇ ತಿಂಗಳವರೆಗೆ ಮಗುವಿನ ಗಾತ್ರದ ಅನುಸಾರ ಟೂತ್ ಬ್ರಷ್ ಅನ್ನು ಬಳಸಿ ದಿನಕ್ಕೆ ಎರಡು ಬಾರಿ ಹಲ್ಲನ್ನು ಸ್ವಚಗೊಳಿಸಬೇಕು. ನಂತರದ ದಿನದಲ್ಲಿ ಹಲ್ಲಿನ ಗಾತ್ರ ಅನುಸರಿಸಿ ಬಟನ್ ಟೂತ್ ಬ್ರಷ್ ಗಳನ್ನು ಉಪಗಿಸಬಹುದು ,ಪೋಷಕರು ಗಮನಿಸ ಬೇಕಾದಂತಹ ಮುಖ್ಯ ಅಂಶ ದಿನಕ್ಕೆ ಎರಡು ಬಾರಿ ಹಲ್ಲುಜ್ಜುವುದು ಮಕ್ಕಳಿಗೆ ದಿನಚರಿಯಂತೆ ಮಾಡುವುದು ಬಹಳ ಉತ್ತಮ ಹಲ್ಲುಜ್ಜುವುದು ಮತ್ತು ಬಾಯಿ ಮುಕ್ಕಳಿಸುವುದು ಹಲ್ಲುಗಳ ಎಲ್ಲಾ ಮೇಲ್ಮೈಗಳಲ್ಲಿ ಹಲ್ಲುಜ್ಜುವುದು ಉತ್ತಮ ಅಭ್ಯಾಸ. ಹಲ್ಲುಜ್ಜಲು ತೆಗೆದುಕೊಳ್ಳುವ ಸಮಯವು ಮೇಲಿನ ಮತ್ತು ಕೆಳಗಿನ ಹಲ್ಲುಗಳಿಗೆ ಕನಿಷ್ಠ ಎರಡು ನಿಮಿಷಗ...