ಸಂಗೀತವೂ ಒಂದು ಮದ್ದು : ಔಷಧವೂ ಭರಿಸಲಾಗದ ಗಾಯಗಳನ್ನು ಸಂಗೀತ ಗುಣಪಡಿಸುತ್ತದೆ
ಸಂಗೀತವೂ ಒಂದು ಮದ್ದು : ಔಷಧವೂ ಭರಿಸಲಾಗದ ಗಾಯಗಳನ್ನು ಸಂಗೀತ ಗುಣಪಡಿಸುತ್ತದೆ " Music can heal the wound, That medicine cannot touch " ಎಂದು " ವರ್ಸಸ್ ಆಫ್ ಹ್ಯಾಪಿನೆಸ್"ನ ಲೇಖಕ ಡೆಬಾಸಿಷ್ ಮ್ರಿದಾ ( Debasish Mridha) ಹೇಳಿದ್ದಾರೆ. ಇದರ ಅರ್ಥ ಔಷಧವೂ ಭರಿಸಲಾಗದ ಗಾಯಗಳನ್ನು ಸಂಗೀತ ಗುಣಪಡಿಸುತ್ತದೆ ಎಂದು. ಹೌದು ಸಂಗೀತಕ್ಕೆ ಇಂತಹ ಒಂದು ಅದ್ಭುತ ಶಕ್ತಿ ಇದೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಹಾಗಿದ್ರೆ ಸಂಗೀತದಿಂದ ನಮಗಾಗುವ ಆರೋಗ್ಯ ಪ್ರಯೋಜನಗಳು ಯಾವುವು ಎಂದು ತಿಳಿಯೋಣ ಬನ್ನಿ . ನೀವು ಯಾವಾಗಲೂ ಸಂಗೀತ ಕೇಳುತ್ತಾ ಇರುತ್ತೀರಾ? ಮ್ಯೂಸಿಕ್ ಅಂದ್ರೆ ನಿಮಗೆ ಅಷ್ಟೊಂದು ಇಷ್ಟನಾ..? ಒಂದುವೇಳೆ ನೀವು ಸಂಗೀತ ಕೇಳುವ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದರೆ ಖಂಡಿತ ನೀವು ಸಂಗೀತದಿಂದಾಗುವ ಆರೋಗ್ಯದ ಲಾಭಗಳನ್ನು ಪಡೆಯುತ್ತಿದ್ದೀರಿ. ಹೌದು ಸಂಗೀತಕ್ಕೂ - ಆರೋಗ್ಯಕ್ಕೂ ಅವಿನಾಭಾವ ಸಂಬಂಧವಿದೆ. ಯಾರು ಸಂಗೀತದೊಳಗಿನ ಭಾವವನ್ನು ಅರ್ಥೈಸಿಕೊಂಡು ಆಲಿಸುತ್ತಾರೋ ಅವರಿಗೆ ಸಂಗೀತದಿಂದಾಗುವ ಆರೋಗ್ಯ ಪ್ರಯೋಜನಗಳ ಅನುಭವವಾಗಿರುತ್ತದೆ.ಕೆಲವು ಹಾಡುಗಳನ್ನು ಅಥವಾ ಮ್ಯೂಸಿಕ್ ಅನ್ನು ಕೇಳಿದಾಗ ಬೇಸರದಲ್ಲಿದ್ದರೂ ಮನಸ್ಸಿಗೆ ಸಮಾಧಾನ ಎನಿಸುತ್ತದೆಯಲ್ಲವೇ, ಅದಕ್ಕೆ ಕಾರಣವಿದೆ. ಮೆದುಳು ಸಂಗೀತವನ್ನು ಸ್ವೀಕರಿಸುವ ರೀತಿ: ನಮ್ಮ ಮೆದುಳು ಕರ್ಕಶ ಶಬ್ದ ಮತ್ತು ಸುಮಧುರ ಶಬ್ದಗಳೆರಡನ್ನೂ ಸ್ವೀಕರ