Posts

ಸಂಗೀತವೂ ಒಂದು ಮದ್ದು : ಔಷಧವೂ ಭರಿಸಲಾಗದ ಗಾಯಗಳನ್ನು ಸಂಗೀತ ಗುಣಪಡಿಸುತ್ತದೆ

Image
 ಸಂಗೀತವೂ ಒಂದು ಮದ್ದು : ಔಷಧವೂ ಭರಿಸಲಾಗದ ಗಾಯಗಳನ್ನು ಸಂಗೀತ ಗುಣಪಡಿಸುತ್ತದೆ " Music can heal the wound, That medicine cannot touch " ಎಂದು " ವರ್ಸಸ್ ಆಫ್ ಹ್ಯಾಪಿನೆಸ್"ನ ಲೇಖಕ ಡೆಬಾಸಿಷ್ ಮ್ರಿದಾ ( Debasish Mridha) ಹೇಳಿದ್ದಾರೆ. ಇದರ ಅರ್ಥ  ಔಷಧವೂ ಭರಿಸಲಾಗದ ಗಾಯಗಳನ್ನು ಸಂಗೀತ ಗುಣಪಡಿಸುತ್ತದೆ ಎಂದು. ಹೌದು ಸಂಗೀತಕ್ಕೆ ಇಂತಹ ಒಂದು ಅದ್ಭುತ ಶಕ್ತಿ ಇದೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಹಾಗಿದ್ರೆ ಸಂಗೀತದಿಂದ ನಮಗಾಗುವ  ಆರೋಗ್ಯ ಪ್ರಯೋಜನಗಳು ಯಾವುವು ಎಂದು ತಿಳಿಯೋಣ ಬನ್ನಿ .  ನೀವು ಯಾವಾಗಲೂ ಸಂಗೀತ ಕೇಳುತ್ತಾ ಇರುತ್ತೀರಾ? ಮ್ಯೂಸಿಕ್ ಅಂದ್ರೆ ನಿಮಗೆ ಅಷ್ಟೊಂದು ಇಷ್ಟನಾ..? ಒಂದುವೇಳೆ ನೀವು ಸಂಗೀತ ಕೇಳುವ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದರೆ ಖಂಡಿತ ನೀವು  ಸಂಗೀತದಿಂದಾಗುವ ಆರೋಗ್ಯದ ಲಾಭಗಳನ್ನು ಪಡೆಯುತ್ತಿದ್ದೀರಿ. ಹೌದು ಸಂಗೀತಕ್ಕೂ - ಆರೋಗ್ಯಕ್ಕೂ ಅವಿನಾಭಾವ ಸಂಬಂಧವಿದೆ. ಯಾರು ಸಂಗೀತದೊಳಗಿನ ಭಾವವನ್ನು ಅರ್ಥೈಸಿಕೊಂಡು ಆಲಿಸುತ್ತಾರೋ ಅವರಿಗೆ ಸಂಗೀತದಿಂದಾಗುವ ಆರೋಗ್ಯ ಪ್ರಯೋಜನಗಳ ಅನುಭವವಾಗಿರುತ್ತದೆ.ಕೆಲವು ಹಾಡುಗಳನ್ನು ಅಥವಾ ಮ್ಯೂಸಿಕ್ ಅನ್ನು ಕೇಳಿದಾಗ ಬೇಸರದಲ್ಲಿದ್ದರೂ ಮನಸ್ಸಿಗೆ  ಸಮಾಧಾನ ಎನಿಸುತ್ತದೆಯಲ್ಲವೇ, ಅದಕ್ಕೆ ಕಾರಣವಿದೆ. ಮೆದುಳು ಸಂಗೀತವನ್ನು ಸ್ವೀಕರಿಸುವ ರೀತಿ: ನಮ್ಮ ಮೆದುಳು  ಕರ್ಕಶ ಶಬ್ದ‌ ಮತ್ತು  ಸುಮಧುರ ಶಬ...

ಬೆಳಗ್ಗೆ ಹಲ್ಲುಜ್ಜುವ ಮೊದಲೇ ನೀರು ಕುಡಿಯಿರಿ: ಅದ್ಭುತ ಆರೋಗ್ಯ ಅನುಕೂಲ ನಿಮ್ಮದಾಗಿಸಿ

Image
 ಬೆಳಗ್ಗೆ ಹಲ್ಲುಜ್ಜುವ ಮೊದಲೇ ನೀರು ಕುಡಿಯಿರಿ: ಅದ್ಭುತ ಆರೋಗ್ಯ ಅನುಕೂಲ ನಿಮ್ಮದಾಗಿಸಿ ಹಲ್ಲುಜ್ಜುವ ಮೊದಲು ನೀರು ಕುಡಿಯುವುದು ನಿಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ನಿಮಗೆ ತಿಳಿದಿದೆಯೇ? ಹೌದು.. ಬೆಳಗ್ಗೆ ಹಲ್ಲುಜ್ಜುವ ಮೊದಲು ನೀರು ಕುಡಿಯುವುದರಿಂದ ನಾನಾ  ಆರೋಗ್ಯ ಪ್ರಯೋಜನಗಳನ್ನು ನಿಮ್ಮದಾಗಿಸಬಹುದು.  ಸಾಮಾನ್ಯವಾಗಿ ನಾವೆಲ್ಲಾ ಮನೆಯಲ್ಲಿ ಬೆಳಗ್ಗೆ (Morning) ಎದ್ದ ತಕ್ಷಣ ನಮ್ಮ ಮನೆಯಲ್ಲಿರುವ ಹಿರಿಯರು ನಮಗೆ ‘ಹಾಸಿಗೆಯಿಂದ ಬೆಳಿಗ್ಗೆ ಎದ್ದ ತಕ್ಷಣವೇ ಒಂದು ಲೋಟ ಬಿಸಿ ನೀರನ್ನು (Hot Water) ಕುಡಿಯಿರಿ, ಆರೋಗ್ಯಕ್ಕೆ ಒಳ್ಳೆಯದು’ ಎಂದು ಹೇಳುತ್ತಾ ಇರುವುದನ್ನು ನಾವು ಪ್ರತಿದಿನ ಕೇಳುತ್ತಿರುತ್ತೇವೆ ಅಂತ ಹೇಳಬಹುದು. ಹಾಗೆ ಮಾಡುವುದರಿಂದ ಆರೋಗ್ಯಕರ ಪ್ರಯೋಜನಗಳಿವೆ ಎಂದು ನಮಗೆ ನಮ್ಮ ಮನೆಯಲ್ಲಿನ ಹಿರಿಯರು ಹೇಳಿದರೂ ಸಹ ನಾವು ಅದನ್ನು ಅನೇಕ ಬಾರಿ ನಿರ್ಲಕ್ಷಿಸುತ್ತೇವೆ. ಏನೋ ಹಿರಿಯರು ಹೇಳುತ್ತಿದ್ದಾರೆ ಎಂದು ನಾವು ಒಂದೆರಡು ದಿನ ಅದನ್ನು ಪಾಲಿಸಿದರೂ ಮೂರನೆಯ ದಿನ ಹಾಗೆ ಹಾಸಿಗೆಯಿಂದ (Bed) ಎದ್ದು ಅವಸರದಲ್ಲಿ ಬಾತ್‌ರೂಮ್ ಗೆ ಹೋಗಿ ಬಡಬಡನೆ ಹಲ್ಲುಜ್ಜಿಕೊಂಡು ಬಿಡುತ್ತೇವೆ. ಆನಂತರ ‘ಅರೇ ಹಲ್ಲುಜ್ಜುವ (Brushing) ಮೊದಲು ನೀರು ಕುಡಿಯುವುದನ್ನೇ ಮರೆತುಬಿಟ್ಟೆ’ ಎಂದು ಹೇಳುವುದುಂಟು.ಕೆಲವರಿಗೆ ಬೆಳಗ್ಗೆ ಹಾಸಿಗೆಯಿಂದ ಎದ್ದ ತಕ್ಷಣವೇ ಕುಡಿಯಲು ಚಹಾ ಅಥವಾ ಟೀ ಬೇಕೇ ಬೇಕು, ಇಲ್ಲದಿದ್ದರೆ ಅವರಿಗೆ ...

ಸ್ಟಾರ್‌ ಫ್ರೂಟ್‌ ತಿನ್ನಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ Benefifs of Star Fruit

Image
 ಸ್ಟಾರ್‌ ಫ್ರೂಟ್‌ ತಿನ್ನಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ ಭಾರತದಲ್ಲಿ ಮಳೆಗಾಲವು (Rainy Season) ಆರಂಭವಾದ ಕೂಡಲೇ ಸುಡುವ ಬೇಸಿಗೆಯಿಂದ ನಮಗೆ ಮುಕ್ತಿ ಸಿಗುತ್ತೆ. ವಾತಾವರಣ (Weather) ತಂಪಾಗುತ್ತೆ. ಜೊತೆಗೆ ಪರಿಸರದಲ್ಲೂ ಅನೇಕ ಬದಲಾವಣೆಗಳಾಗುತ್ತವೆ.  ಇದ್ದಕ್ಕಿದ್ದಂತೆ ವಾತಾವರಣ ಬದಲಾದಾಗ ಮನುಷ್ಯನ ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಆಗಿ ಅನೇಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆ ಆರೋಗ್ಯ ಸಮಸ್ಯೆಗಳಿಂದ ದೂರವಿರಲು ಮತ್ತು ರೋಗ ನಿರೋಧಕ ಶಕ್ತಿಯನ್ನು ಸುಧಾರಿಸಲು ನಾವು ಆಯಾ ಕಾಲದಲ್ಲಿ ಸಿಗುವ ಹಣ್ಣು ಮತ್ತು ತರಕಾರಿಗಳನ್ನು  ತಿಂದು ಅನಾರೋಗ್ಯಕ್ಕೆ ತುತ್ತಾಗುವುದನ್ನು ತಡೆಯಬಹುದು. ಈ ರೀತಿ ಮಳೆಗಾಳದಲ್ಲಿ ನಮ್ಮ ಆರೋಗ್ಯ ಕಾಪಾಡುವ ಒಂದು ಹಣ್ಣಿನ ಪರಿಚಯ ಮಾಡಿಸ್ತೀವಿ ಬನ್ನಿ.   ಯಸ್‌, ಸ್ಟಾರ್ ಫ್ರೂಟ್. ಇದನ್ನು ಕ್ಯಾರಂಬೋಲ ಹಣ್ಣು ಅಂತಲೂ ಕರೀತಾರೆ. ಹಸಿರು  ಹಳದಿ ಬಣ್ಣದ ಈ ಹಣ್ಣನ್ನು ಕತ್ತರಿಸಿದ ನಂತರ ನಕ್ಷತ್ರದಂತಹ ಆಕಾರ ಕಾಣಬಹುದಾಗಿದೆ. ಹುಳಿ ರುಚಿಯನ್ನು ಹೊಂದಿರುವ ಇದು ಕ್ವೆರ್ಸೆಟಿನ್, ಗ್ಯಾಲಿಕ್ ಆಮ್ಲ ಮತ್ತು ಎಪಿಕಾಟೆಚಿನ್ ಸೇರಿದಂತೆ ಹಲವು ಪೋಷಕ ತತ್ವಗಳನ್ನು ಹೊಂದಿದ್ದು ಆರೋಗ್ಯಕ್ಕೆ ಉತ್ತಮವಾಗಿರುತ್ತದೆ. ಶಕ್ತಿಯುತವಾದ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳನ್ನು ಮತ್ತು ವಿವಿಧ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ. ಸ್ಟಾರ್ ಹಣ್ಣು ಕೊಬ್ಬಿನ ಅಂಶಗಳನ್ನು ಕಡಿ...

ಮಾನವನ ಆರೋಗ್ಯ ಸಂಜೀವಿನಿ – ‘ಸ್ಪಿರುಲಿನಾ’ Health Benefits of Spirulina

Image
 ಮಾನವನ ಆರೋಗ್ಯ ಸಂಜೀವಿನಿ – ‘ಸ್ಪಿರುಲಿನಾ’  ಸ್ಪಿರುಲಿನಾ  ಸಮುದ್ರದಲ್ಲಿ ಸಿಗುವ ವಿಶೇಷ ಬಗೆಯ ಪಾಚಿ. ಇದು ನೀಲಿ ಹಸಿರಿನ ಬಣ್ಣದಿಂದ ಕೂಡಿದ ಪಾಚಿಯಾಗಿದೆ. ಇದರ ವಿಶೇಷತೆ ಏನಂದ್ರೆ ಇದು ಮನುಷ್ಯರಲ್ಲಿ ಯಾವುದೇ ಗಮನಾರ್ಹ ಅಡ್ಡಪರಿಣಾಮಗಳಿಲ್ಲದೆ ಪ್ರೋಟೀನ್ ಮತ್ತು ವಿಟಮಿನ್ ಪೂರಕಗಳ ಮೂಲದ ರೂಪದಲ್ಲಿ ಬಳಸಲಾಗುತ್ತದೆ.ಸ್ಪಿರುಲಿನಾವು ತೇವಾಂಶವುಳ್ಳ ಮಣ್ಣು, ಮಿಶ್ರಲೋಹ ಲವಣಯುಕ್ತ ನೀರು, ಮರಗಳ ತೊಗಟೆ ಮತ್ತು ತೇವಾಂಶವುಳ್ಳ ಗೋಡೆಗಳ ಮೇಲೆ ಹಸಿರು, ಕಂದು ಅಥವಾ ಕೆಲವು ಕಪ್ಪು ಪದರಗಳ ರೂಪದಲ್ಲಿ ಕಂಡುಬರುತ್ತದೆ.  ಇದು ಕ್ಷಾರೀಯ ಸರೋವರಗಳಲ್ಲಿ ಹೆಚ್ಚಾಗಿ ಬೆಳೆಯುತ್ತದೆ  ಮತ್ತು ಸಮುದ್ರದ  ತುಂಬಾ  ತಳಭಾಗದಲ್ಲಿ ದೊರೆಯುತ್ತದೆ. ಇದು ಭಾರತ,ಅಮೆರಿಕ, ಸ್ಪೇನ್, ಜಪಾನ್ ಹಾಗೂ ವಿಶ್ವದಾದ್ಯಂತ  ಕೆಲವು ದೇಶಗಳಲ್ಲಿ  ಮಾತ್ರ ಬೆಳೆಯುತ್ತಾರೆ.   ಸ್ಪಿರುಲಿನಾದಲ್ಲಿ ಶೇ. 60 ರಿಂದ 70 ರಷ್ಟು ಪ್ರೋಟೀನ್ ಇರುತ್ತದೆ. ಇದರಲ್ಲಿ ವಿಟಮಿನ್ ಬಿ 12, ಖನಿಜಗಳು, ಪ್ರೊ ವಿಟಮಿನ್ ಎ, ಕಬ್ಬಿಣದ ಅಂಶಗಳು ಅತ್ಯಧಿಕ  ಪ್ರಮಾಣದಲ್ಲಿ ಕಂಡುಬರುತ್ತದೆ ಮತ್ತು ಅನೇಕ ರೋಗಗಳ  ಲಕ್ಷಣಗಳನ್ನು ಸುಧಾರಿಸುತ್ತದೆ.  ಉದಾಹರಣೆ :  ಸಮುದ್ರದಲ್ಲಿ  ಆಮೆಯು ಇದನ್ನು ತಿನ್ನುವುದರ ಮೂಲಕ ಶೇಕಡ 150 ರಿಂದ 200 ವರ್ಷ ತನ್ನ ಜೀವಾವಧಿ ಕಳೆಯುತ್ತದೆ, ಇದರ ಮೂಲಕ ತಂತ್ರಜ್ಞಾನಿಗಳು...

‘ಕಾರ್ನ್ ಸಿಲ್ಕ್’ ಜೋಳದ ಕೂದಲನ್ನು ಬಿಸಾಡುವ ಮುನ್ನ ಈ ವರದಿ ಓದಿ

Image
 ‘ಕಾರ್ನ್ ಸಿಲ್ಕ್’ ಜೋಳದ ಕೂದಲನ್ನು ಬಿಸಾಡುವ  ಮುನ್ನ ಈ ವರದಿ ಓದಿ ಜೋಳವನ್ನು ನೀವೆಲ್ಲರೂ ಹೆಚ್ಚು ಇಷ್ಟಪಟ್ಟು ತಿಂದು,  "ಕಾರ್ನ್ ಸಿಲ್ಕ್ " (Corn Silk) ಅಥವಾ ಜೋಳದ ಕೂದಲನ್ನು ಕಿಂಚಿತ್ತೂ ಯೋಚಿಸದೆ  ಧಾರಾಳವಾಗಿ ಬಿಸಾಡುತ್ತೀರಾ? ಹಾಗಾದ್ರೆ ಈ ವರದಿ ಓದಲೇ ಬೇಕು. ಯಾಕಂದ್ರೆ  ಜೋಳದ ಕೂದಲಿನಿಂದ ಆಗುವ ಆರೋಗ್ಯ ಪ್ರಯೋಜನಗಳನ್ನು ತಿಳಿದ್ರೆ, ಮುಂದೆ ಖಂಡಿತಾ ನೀವು ಜೋಳದ ಕೂದಲನ್ನು ಬಿಸಾಡುವುದಿಲ್ಲ. ಹಾಗಾದ್ರೆ ಜೋಳದ ಕೂದಲಿನಿಂದಾಗುವ ಆರೋಗ್ಯ ಪ್ರಯೋಜನಗಳು ಏನೆಂದು ತಿಳಿಯೋಣ ಬನ್ನಿ ...!! 1.   ಜೋಳದ ಕೂದಲು ಮೂತ್ರಪಿಂಡದ ಕಲ್ಲುಗಳನ್ನು ತಡೆಗಟ್ಟಲು ಬಹಳಷ್ಟು ಉಪಯೋಗಕಾರಿಯಾಗಿ ಕೆಲಸ ಮಾಡುತ್ತದೆ. 2. ಇನ್ನು "ಕಾರ್ನ್ ಸಿಲ್ಕ್" ನಲ್ಲಿರುವ ವಿಟಮಿನ್ "ಕೆ" ಗಾಯವಾದಾಗ ರಕ್ತ ಹೆಪ್ಪುಗಟ್ಟಲು ಸಹಾಯ ಮಾಡುತ್ತದೆ. ಇದರಿಂದ ದೇಹದಲ್ಲಾಗುವ ರಕ್ತಸ್ರಾವವನ್ನು ತಡೆಯಬಹುದು. 3. ಇನ್ನು ಇತ್ತೀಚಿನ ದಿನಗಳಲ್ಲಿ ಕಾರ್ನ್ ಸಿಲ್ಕ್  ದೇಹದಲ್ಲಿಯ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಲು ಸಹಕಾರಿ ಎಂದು ತಿಳಿದುಬಂದಿದೆ. ಹಾಗಾಗಿ ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಣ ಮಾಡುತ್ತದೆ. 4. ಇದಿಷ್ಟೇ ಅಲ್ಲದೆ ದೇಹದಲ್ಲಿನ ಕೊಲೆಸ್ಟ್ರಾಲ್ ಅನ್ನೂ ಸಹ ನಿಯಂತ್ರಣ  ಮಾಡುತ್ತದೆ.  ಹಾಗಿದ್ದರೆ "ಕಾರ್ನ್ ಸಿಲ್ಕ್" ಬಳಸೋದು ಹೇಗೆ ...? 1. ನೀರನ್ನು ಕುದಿಸಿ , ಅದಕ್ಕೆ ಸ್ವಲ್ಪ ...

ಹಲ್ಲು ಕುಳಿ ನಿರ್ಲಕ್ಷ್ಯ ಬೇಡ, ಜೀವನ ಪರ್ಯಂತ ಸಮಸ್ಯೆ ಕೊಡುತ್ತೆ ಎಚ್ಚರ !

Image
ಹಲ್ಲು ಕುಳಿ ನಿರ್ಲಕ್ಷ್ಯ ಬೇಡ, ಜೀವನ ಪರ್ಯಂತ ಸಮಸ್ಯೆ ಕೊಡುತ್ತೆ ಎಚ್ಚರ !  ಹಲ್ಲಿನ ಆರೈಕೆ ಆರಂಭದ ಹಂತದಲ್ಲಿಯೇ ಮಾಡುತ್ತಾ ಬರಬೇಕಾಗುತ್ತದೆ .ಹಲ್ಲಿನ ಕೊಳೆತ ಅಥವಾ ಹಲ್ಲಿನ ಕುಳಿಗಳು ಮಕ್ಕಳಲ್ಲಿ ಕಾಣಿಸುವ ಸಮಸ್ಯೆಗಳಲ್ಲಿ ಒಂದಾಗಿದೆ . ಕುಳಿಗಳನ್ನು ಇತ್ತೀಚಿನ ಪೋಷಕರು ನಿರ್ಲಕ್ಷ್ಯ ಭಾವದಿಂದ ನೋಡುತ್ತಿದ್ದಾರೆ ಆದರೆ ಅದು ತಪ್ಪು ಹಲ್ಲಿನ ಕುಳಿ ಕೊಳೆತವಾಗಿ ಮಾರ್ಪಟ್ಟು ಶಾಶ್ವತ ಹಲ್ಲಿನ ಸಮಸ್ಯೆಗೆ ಕಾರಣವಾಗಬಹುದು . ಹಲ್ಲುಗಳನ್ನು ಆರೋಗ್ಯವಾಗಿಡಲು ಕೆಲವೊಂದು ಉತ್ತಮ ಮಾರ್ಗಗಳನ್ನು ಅನುಸರಿಸಬೇಕು  ಮಕ್ಕಳಲ್ಲಿನ ಹಲ್ಲಿನ ಆರೈಕೆ ಮಗು ಜನಿಸಿದ ಸುಮಾರು 12 ತಿಂಗಳವರೆಗೆ ಎದೆ ಹಾಲು ಉಣಿಸಿದ ನಂತರ ಮೃದುವಾದ ಬಟ್ಟೆಯಿಂದ ಒಸಡನ್ನು ಶುಚಿಗೊಳಿಸಬೇಕು. 12 ತಿಂಗಳಿಂದ 24 ನೇ ತಿಂಗಳವರೆಗೆ ಮಗುವಿನ ಗಾತ್ರದ ಅನುಸಾರ ಟೂತ್ ಬ್ರಷ್ ಅನ್ನು ಬಳಸಿ ದಿನಕ್ಕೆ ಎರಡು ಬಾರಿ ಹಲ್ಲನ್ನು ಸ್ವಚಗೊಳಿಸಬೇಕು. ನಂತರದ ದಿನದಲ್ಲಿ ಹಲ್ಲಿನ ಗಾತ್ರ ಅನುಸರಿಸಿ ಬಟನ್ ಟೂತ್ ಬ್ರಷ್ ಗಳನ್ನು ಉಪಗಿಸಬಹುದು ,ಪೋಷಕರು ಗಮನಿಸ ಬೇಕಾದಂತಹ ಮುಖ್ಯ ಅಂಶ ದಿನಕ್ಕೆ ಎರಡು ಬಾರಿ ಹಲ್ಲುಜ್ಜುವುದು ಮಕ್ಕಳಿಗೆ ದಿನಚರಿಯಂತೆ ಮಾಡುವುದು ಬಹಳ ಉತ್ತಮ ಹಲ್ಲುಜ್ಜುವುದು ಮತ್ತು ಬಾಯಿ ಮುಕ್ಕಳಿಸುವುದು  ಹಲ್ಲುಗಳ ಎಲ್ಲಾ ಮೇಲ್ಮೈಗಳಲ್ಲಿ ಹಲ್ಲುಜ್ಜುವುದು ಉತ್ತಮ ಅಭ್ಯಾಸ. ಹಲ್ಲುಜ್ಜಲು ತೆಗೆದುಕೊಳ್ಳುವ ಸಮಯವು ಮೇಲಿನ ಮತ್ತು ಕೆಳಗಿನ ಹಲ್ಲುಗಳಿಗೆ ಕನಿಷ್ಠ ಎರಡು ನಿಮಿಷಗ...

೬೦ ವರ್ಷಗಳ ಬಳಿಕ ಲೋಗೋ ಬದಲಾಯಿಸಲಿದೆ NOKIA: ಹೇಗಿರಲಿದೆ ಹೊಸ ರೂಪ?

Image
 ೬೦ ವರ್ಷಗಳ ಬಳಿಕ ಲೋಗೋ ಬದಲಾಯಿಸಲಿದೆ NOKIA: ಹೇಗಿರಲಿದೆ ಹೊಸ ರೂಪ? ನೋಕಿಯಾ ಯಾರಿಗೆ ಗೊತ್ತಿಲ್ಲ ಈ ಬ್ರಾಂಡ್? ಮೊಬೈಲ್ ಅಂದ ತಕ್ಷಣ ನಮಗೆ ನೆನಪಾಗೋದೇ ನೋಕಿಯಾ ಬ್ರಾಂಡ್. ಅದರ ಲೋಗೋ, ಅದರ ಅಕ್ಷರಗಳು ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ. ಆದ್ರೆ ೬೦ ವರ್ಷಗಳ ಬಳಿಕ ಈಗ ನೋಕಿಯಾ ತನ್ನ ಲೋಗೋವನ್ನು ಬದಲಾಯಿಸುವ ನಿರ್ಧಾರ ಮಾಡಿದೆ. ಪ್ರಸಿದ್ಧ ಟೆಲಿಕಾಮ್ ಸಾಧನ ಉತ್ಪಾದಕ ಸಂಸ್ಥೆ ಇದೀಗ ಹೊಸ ರೂಪ, ಹೊಸ ಆಲೋಚನೆಗಳೊಂದಿಗೆ ಮಾರುಕಟ್ಟೆಗೆ ಬರಲಿದೆ. ಹೊಸ NOKIA ಲೋಗೋದಲ್ಲಿ ಪ್ರತಿಯೊಂದು ಅಕ್ಷರ ಸಹಿತ ವಿಭಿನ್ನ ರೂಪದಲ್ಲಿರಲಿದೆ. . ಮಾರುಕಟ್ಟೆಯಲ್ಲಿ ಜನರ ಮನಸ್ಸನ್ನ ಸೆಳೆಯುವ ವಿಶಿಷ್ಟ ಆಕಾರ ಹೊಂದಿದೆ. ಈ ಹಿಂದೆ ಸ್ಮಾರ್ಟ್ ಫೋನ್ ಗಳಿಗೆ ಸಂಬಂದಿಸಿದ ನಮ್ಮ ಸಂಸ್ಥೆ ಇಂದು ವ್ಯಾಪಾರ ತಂತ್ರಜ್ಞಾನ ಸಂಸ್ಥೆ ಆಗಿದೆ. 2020ರ ಬಳಿಕ ಮರುಹೊಂದಿಕೆ, ವೇಗವರ್ಧನ ಮತ್ತು ಪ್ರಮಾಣ ಹೀಗೆ.. ಮೂರು ಕಾರ್ಯತಂತ್ರವನ್ನು ನಾವು ಇರಿಸಿಕೊಂಡಿದ್ದೇವು. ನಮ್ಮ ಕಂಪೆನಿ ಹೊಸ ಧ್ಯೇಯ, ಹೊಸ ರೂಪ ಹಾಗೂ ಹೊಸ ಗುರಿಯೊಂದಿಗೆ ಮಾರುಕಟ್ಟೆಗೆ ಬರಲಿದೆ.  ಇದೀಗ ಮರುಹೊಂದಿಸುವ ಹಂತ ಮುಗಿದಿದೆ ಎಂದು  Nokia ದ ಸಿಇಓ ಪೆಕ್ಕಾ ಲುಂಡ್ಮಾರ್ಕ್ ಹೇಳಿದ್ದಾರೆ. ನೆಟ್ವರ್ಕಿಂಗ್ ತಂತ್ರಜ್ಞಾನದಲ್ಲಿ ನೋಕಿಯಾ ತನ್ನ ನಾಯಕತ್ವ ವನ್ನು ಪ್ರತಿಪಾದಿಸುವ ಸಮಯ ಬಂದಿದೆ.  ಇದು ಹಿಂದಿನ ಲೋಗೋದ ಪರಂಪರೆಯ ಆಧಾರವಾಗಿ ಇಟ್ಟುಕೊಂಡು  ಹೊಸ ಲೋಗೋದಲ್ಲಿ ನಮ್ಮ ಹ...

ನಿಮ್ಮ ಅಂಗೈಗಳು ಬೆವರುತ್ತಿವೆಯಾ ,ಹಾಗಾದರೆ ಪರಿಹಾರ ಇಲ್ಲಿದೆ ನೋಡಿ

Image
 ನಿಮ್ಮ ಅಂಗೈಗಳು ಬೆವರುತ್ತಿವೆಯಾ ,ಹಾಗಾದರೆ ಪರಿಹಾರ ಇಲ್ಲಿದೆ ನೋಡಿ ಆತಂಕ, ಒತ್ತಡ ಮತ್ತು ಹೆದರಿಕೆ ಮತ್ತು ಯಾವುದೋ ಕಾರ್ಯಕ್ರಮದಲ್ಲಿ ಮಾತನಾಡುವಾಗ ನಿಮ್ಮ ಅಂಗೈಗಳು  ಬೆವರುವುದು ನೀವು ಗಮನಿಸರಬಹುದು ,ಒತ್ತಡ ಆತಂಕ ಮತ್ತು ಹೆದರುವಿಕೆ ಉಂಟಾದಾಗ ದೇಹದ ಹಾರ್ಮೋನುಗಳು ಕ್ರಿಯೆ ಪ್ರತಿಕ್ರಿಯೆಯ ಸಂದರ್ಭದಲ್ಲಿ ಕಾರ್ಟಿಸೋಲ್ ಮತ್ತು ಎಪಿನ್ಫ್ರಿನ್ ಅನ್ನು ಬಿಡುಗಡೆ ಮಾಡುತ್ತದೆ ಈ ಹಾರ್ಮೋನುಗಳು ನಿಮ್ಮ ದೇಹದ ಉಷ್ಣತೆಯನ್ನು ಹೆಚ್ಚಿಸುತ್ತವೆ. ಸಹಜವಾಗಿ, ನಿಮ್ಮ ದೇಹವು ನಿಮ್ಮ ತಾಪಮಾನವನ್ನು ನಿಯಂತ್ರಿಸುವ ಸಲುವಾಗಿ ಬೆವರನ್ನು ಹೊರ ಹಾಕುತ್ತದೆ . ಹಾಗಾದರೆ ಬೆವರುವ ಅಂಗೈಗಳಿಗೆ ಪರಿಹಾರವೇನು?   ಬೆವರುವ ಅಂಗೈಗಳಿಗೆ ಪರಿಪೂರ್ಣ ಚಿಕಿತ್ಸೆ ಇಲ್ಲದಿದ್ದರೂ ಅದನ್ನು ನಿಯಂತ್ರಣ ಮಾಡಲು ಕೆಲವೊಂದು ಸಲಹೆಗಳು ಇಲ್ಲಿವೆ ನೋಡಿ  •ಆಂಟಿಪೆರ್ಸ್ಪಿರಂಟ್ ಲೋಷನ್  ಆಂಟಿಪೆರ್ಸ್ಪಿರಂಟ್   ಬೆವರುವಿಕೆಯನ್ನು ನಿಯಂತ್ರಿಸಲು ಸುಲಭವಾದ ಮಾರ್ಗವಾಗಿದೆ. ಇದು ನಾನಾ ರೀತಿ ಮಾರುಕಟ್ಟೆಯಲ್ಲಿ ಲಭ್ಯವಿದ್ದು ಲೋಷನ್ಗಳನ್ನೂ ಹಚ್ಚುವುದು ಹೆಚ್ಚು ಪರಿಣಾಮಕಾರಿಯಾಗಿದೆ ಇದನ್ನು ಬಳಸುವುದರಿಂದ ನೀವು ತಕ್ಕ ಮಟ್ಟಿಗೆ ಅಂಗೈ ಬೆವರುವಿಕೆಯಿಂದ ದೂರವಿರಬಹುದು. •ಬೇಬಿ ಪೌಡರ್ ಬೇಬಿ ಪೌಡರ್ ದ್ರವವನ್ನು ಹೀರಿಕೊಳ್ಳುವ ಗುಣವನ್ನು ಹೊಂದಿದೆ ಆದ್ದರಿಂದ ಯಾವುದಾದರೂ ಕಾರ್ಯಕ್ರಮದ ಮೊದಲು ನೀವು ಇದನ್ನು ಬಳಸಿದರೆ ಬೆವರನ್ನು ತಡೆಯಬಹುದು...

ತಾಟು ನುಂಗು ‘ಐಸ್‌ ಆಪಲ್‌’ ತಿಂದ್ರೆ ಕೂದಲು ಸೊಂಪಾಗಿ ಬೆಳೆಯುತ್ತೆ ಗೊತ್ತಾ?

Image
ತಾಟು ನುಂಗು ‘ಐಸ್‌ ಆಪಲ್‌’ ತಿಂದ್ರೆ ಕೂದಲು ಸೊಂಪಾಗಿ ಬೆಳೆಯುತ್ತೆ ಗೊತ್ತಾ?  ಉರಿಯುವ ಬಿಸಿಲಿಗೆ ತಂಪು ತಂಪಾಗಿರುವ ಹಣ್ಣು ಸಿಕ್ಕರೆ ಸ್ವರ್ಗಕ್ಕೆ ಮೂರೇ ಗೇಣು. ಅಂಥಾ ಒಂದು ಖುಷಿಯನ್ನು ಕೊಡುವ ಹಣ್ಣು ಅಂದ್ರೆ ಅದು ತಾಟಿ ನುಂಗು. ಇದನ್ನು ತಾಟೆ ನುಂಗು ಅಂತಲೂ ಕರೀತಾರೆ. ತುಳುವಿನಲ್ಲಿ ಈ ಹಣ್ಣನ್ನು ಈರೋಲ್‌ ಅಂತಾರೆ. ಇಂಗ್ಲಿಷ್‌ನಲ್ಲಿ ಐಸ್‌ ಆಪಲ್‌ ಅಂತ ಕರೀತಾರೆ ಗೊತ್ತಾ? ಇನ್ನು ತಮಿಳಿನಲ್ಲಿ ನುಂಗು ಮತ್ತು ತೆಲುಗುದಲ್ಲಿ ತಾತಿಮುಂಜೆಲು ಅಂತ ಕರೆಯುತ್ತಾರೆ.  ಈ ಹಣ್ಣು ಕರುನಾಡಿನ ಕರಾವಳಿ ಭಾಗದಲ್ಲಿ, ತಮಿಳುನಾಡಿನಲ್ಲಿ ಮತ್ತು ಆಂಧ್ರಪ್ರದೇಶದಲ್ಲಿ ಹೆಚ್ಚಾಗಿ ಬೆಳೆಯುತ್ತೆ. ತೆಂಗಿನ ಮರದಂತೆ ಎತ್ತರಕ್ಕೆ ಬೆಳೆಯುವ ಈ ಮರ ಹೆಚ್ಚಿನವರಿಗೆ ಚಿರಪರಿಚಿತ. ಅದ್ರಲ್ಲೂ ಬೇಸಿಗೆ ಬಂತೆಂದರೆ ರಸ್ತೆ ಬದಿಗಳಲ್ಲಿ ಈ ಹಣ್ಣನ್ನು ಮಾರುತ್ತಿರುತ್ತಾರೆ. ಮೃದುವಾಗಿ, ತಂಪಾದ ನೀರಿನ ತಿರುಳನ್ನು ಹೊಂದಿರುವ ಈ ತಾಟಿನುಂಗು ತಿನ್ನಲು ತುಂಬಾನೇ ಮಜಾವಾಗಿರುತ್ತೆ, ಈ ಹಣ್ಣು ಆರೋಗ್ಯಕ್ಕೆ ಪೂರಕವಾದ ಅನೇಕ ಅಂಶಗಳನ್ನು ಹೊಂದಿದ. ಅವು ಯಾವುವು ಅಂತ ನೋಡೋಣ ಬನ್ನಿ. ಈ ಹಣ್ಣಿನ ವಿಶೇಷತೆಗಳೇನು ?   ತಾಟಿ ನುಂಗಲ್ಲಿ ಜೀವಸತ್ವಗಳು, ಖನಿಜಗಳು, ಕ್ಯಾಲ್ಸಿಯಂ, ಫೈಟೊನ್ಯೂಟ್ರಿಯೆಂಟ್‌ಗಳು ಮತ್ತು ಕಾರ್ಬೋಹೈಡ್ರೇಟ್‌ ಸಾಕಷ್ಟು ಪ್ರಮಾಣದಲ್ಲಿದೆ. ಅಲ್ಲದೆ, ಈ ಕಡಿಮೆ ಕ್ಯಾಲೋರಿ ಹಣ್ಣಿನಲ್ಲಿ ಫೈಬರ್, ಪ್ರೋಟೀನ್, ವಿಟಮಿನ್ ಎ, ಸಿ, ಇ ಮತ್ತು ಕೆ,...

ಊಟವಾದ ನಂತರ ಸಿಗರೇಟ್ ಸೇದುತ್ತಿದ್ದೀರಾ ಹಾಗಾದ್ರೆ ಈಗಲೇ ನಿಲ್ಲಿಸಿ !

Image
 ಊಟವಾದ ನಂತರ ಸಿಗರೇಟ್ ಸೇದುತ್ತಿದ್ದೀರಾ ಹಾಗಾದ್ರೆ ಈಗಲೇ ನಿಲ್ಲಿಸಿ ! ಊಟವಾದ ನಂತರ ಹಲವರಿಗೆ ಹಲವಾರು ಅಭ್ಯಾಸಗಳಿರುತ್ತವೆ. ಕೆಲವರಿಗೆ ಚಹಾ ಸವಿಯುವುದು, ಸಿಗರೇಟ್ ಸೇದುವುದು ಅಲ್ಲದೆ, ಮಲಗುವ ಅಭ್ಯಾಸ ಕೂಡ ಇರುತ್ತದೆ. ಇದರಿಂದ ಏನೆಲ್ಲ ತೊಂದರೆಗಳಾಗುತ್ತವೆ ನಿಮಗೆ ಗೊತ್ತಾ? ಊಟ ಆದ ತಕ್ಷಣ ಸಿಗರೇಟ್ ಸೇದಲೇ ಬೇಡಿ ಊಟ ಆದ ತಕ್ಷಣ ಸಿಗರೇಟ್ ಸೇದುವುದರಿಂದ ಹಲವಾರು ಅನಾರೋಗ್ಯ ಕಾಡಬಹುದು ಯಾಕೆಂದರೆ ಅದರಲ್ಲಿರುವ ನಿಕೋಟಿನ್ ಅಂಶವು ನೇರವಾಗಿ ದೇಹದ ಮೇಲೆ ಪರಿಣಾಮ ಬೀರುತ್ತದೆ. ಊಟವಾದ ತಕ್ಷಣ ಸಿಗರೇಟ್ ಸೇದುವುದು 10 ಸಿಗರೇಟ್ ಸೇದುವುದಕ್ಕೆ ಸಮ ಎನ್ನಲಾಗುತ್ತದೆ ಊಟದ ನಂತ್ರ ಚಹಾ ಕುಡಿಯುವುದು ಕೆಟ್ಟ ಅಭ್ಯಾಸ   ಹಲವರು ಊಟದ ಬಳಿಕ ಚಹಾ ಕುಡಿಯೋ ಅಭ್ಯಾಸವನ್ನು ರೂಡಿಸಿಕೊಂಡಿರುತ್ತಾರೆ. ಆದರೆ ಚಹಾದಲ್ಲಿರುವ ಕೆಫಿನ್ ಜೀರ್ಣಕ್ರಿಯೆಗೆ ಅಡ್ಡಿಯನ್ನುಂಟು ಮಾಡುತ್ತದೆ. ಅಲ್ಲದೆ ಆಹಾರದಲ್ಲಿನ ಪ್ರೋಟಿನ್ ಅಂಶವನ್ನು ನಾಶಮಾಡುತ್ತದೆ ಜೊತೆಗೆ ಕಬ್ಬಿನಾಂಶವನ್ನು ಹೀರಿಕೊಳ್ಳುತ್ತದೆ ಆದ್ದರಿಂದ ಊಟವಾದ ತಕ್ಷಣ ಚಹಾ ಕುಡಿಯುವ ಅಭ್ಯಾಸ ಬಿಡುವುದು ಉತ್ತಮ. ಊಟದ ನಂತ್ರ ನಿದ್ರೆ ಮಾಡ್ಬೇಡಿ  ಊಟವಾದ ತಕ್ಷಣ ನಿದ್ರೆ ಮಾಡುವುದು ಹಲವರಿಗೆ ಮನಸ್ಸಿನ ಉಲ್ಲಾಸ ಮುದ ನೀಡುತ್ತದೆ ಎಂಬ ಕಲ್ಪನೆ ಇದೆ  ಆದರೆ ಇದು ಜೀರ್ಣಕ್ರಿಯೆಗೆ ಅಡ್ಡಿಯನ್ನುಂಟು ಮಾಡುತ್ತದೆ. ಆಹಾರ ಕರಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಹಾಗಾಗಿ ಹೊಟ್ಟೆ ತುಂಬಾ ತಿಂದ ತಕ...

ಆರೋಗ್ಯ ಸೂತ್ರ

Image
 ಆರೋಗ್ಯ ಸೂತ್ರ ನಮ್ಮ ಶರೀರ ಎಂಬ ಮನೆಯ ಆರೋಗ್ಯದ ರಕ್ಷಣೆಗೂ ಒಂದು ರಕ್ಷಣಾ ವ್ಯವಸ್ಥೆ ಇರುತ್ತದೆ. ಈ ವ್ಯವಸ್ಥೆಯ ಹೆಸರೇ "ರೋಗ ನಿರೋಧಕ ಶಕ್ತಿ" ರೋಗ ನಿರೋಧಕ ಶಕ್ತಿಯ ಪೋಷಣೆ ಅತ್ಯಗತ್ಯ. ನಾವು ಆರೋಗ್ಯವಾಗಿರಲು ನಮ್ಮ ಶರೀರದ ರೋಗನಿರೋಧಕ ಶಕ್ತಿಯ ವ್ಯವಸ್ಥೆ  ಒಂದು ಸಂಪೂರ್ಣ ವ್ಯವಸ್ಥೆಯಾಗಿದೆ. ಇದು ಕೆಲಸ ಮಾಡುವ ರೀತಿ ಆಧುನಿಕ ವಿಜ್ಞಾನಿಗಳಿಗೆ, ವೈದ್ಯರಿಗೆ ಇನ್ನೂ ಸಂಪೂರ್ಣವಾಗಿ ಅರ್ಥವಾಗಿಲ್ಲ. 3000 ಸಾವಿರ ವರ್ಷಗಳ ಹಿಂದೆಯೇ ಮಹರ್ಷಿ ಪತಂಜಲಿಯ ಶಿಷ್ಯರಾದ ಮಹರ್ಷಿ ವಾಗ್ಬಾಟರು ಸಾವಿರಾರು ಸೂತ್ರಗಳನ್ನು ನೀಡಿದ್ದಾರೆ. ಅವು ಯಾವುವೆಂದರೆ: 1. ನಾವು ಯಾವ ಪ್ರದೇಶದಲ್ಲಿ ವಾಸಿಸುತ್ತಿದ್ದಿರೋ ಅಲ್ಲಿಯ ಪರಿಸರ ವಾತಾವರಣಕ್ಕೆ ತಕ್ಕ ರೀತಿಯ ಜೀವನ ಶೈಲಿಯನ್ನು ಅನುಸರಿಸಿ 2. ನೀರನ್ನು ಯಾವಾಗಲೂ ಕುದಿಯುತ್ತಿರಬೇಕು 3. ಯಾವುದೇ ಕಾರಣಕ್ಕೂ ರೆಫ್ರಿಜರೇಟರ್ ನೀರು ಖಂಡಿತ ಬೇಡ 4. ಊಟ ಮಾಡುವಾಗ ಮಧ್ಯ ಮಧ್ಯದಲ್ಲಿ ನೀರು ಕುಡಿಯಬಾರದು 5. ಬೆಳಗ್ಗಿನ ಉಪಹಾರವನ್ನು ತಪ್ಪಿಸಬಾರದು 6. ಊಟ ಮಾಡಿದ ಕೂಡಲೇ ನೀರು ಮಜ್ಜಿಗೆ ಕುಡಿಯಬೇಕು 7. ಬಿಸಿ ನೀರನ್ನು ಹೆಚ್ಚಾಗಿ ಕುಡಿಯುವುದರಿಂದ ಕೋಬಿನಾಂಶ ಕಡಿಮೆಯಾಗುತ್ತದೆ 8. ಬೆಳಿಗ್ಗೆ ಎದ್ದ ಕೂಡಲೇ ಎರಡು ಲೋಟ ಬಿಸಿ ನೀರು ಕುಡಿಯಿರಿ 9. ಪ್ರತಿ ದಿನ ಎಂಟು ತಾಸು ನಿದ್ದೆ ಮಾಡಿ ಜೀವನ ಶೈಲಿಯು ತುಂಬಾ ಮುಖ್ಯವಾಗಿರುತ್ತದೆ. ವೈಯಕ್ತಿಕ ನಿರ್ಧಾರಗಳ ಒಟ್ಟು ಗೂಡುವಿಕೆಯ ಅನಾರೋಗ್ಯ ಅಥವಾ ಸಾವಿನ ಕಾರಣ ಆಗಬಹ...

ಭ್ರಷ್ಟಾಚಾರದ ಅಂತ್ಯ ಎಂದು..?

Image
  ಭ್ರಷ್ಟಾಚಾರದ ಅಂತ್ಯ ಎಂದು..? ಭಾರತದ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಭ್ರಷ್ಟಾಚಾರದಿಂದ ಪ್ರಜಾಪ್ರಭುತ್ವ ವ್ಯವಸ್ಥೆಯು ದುರ್ಬಲಗೊಳ್ಳುತ್ತಿದೆ, ಜೊತೆಗೆ ಆರ್ಥಿಕ ಅಭಿವೃದ್ಧಿಯನ್ನು ಕುಂಠಿತಗೊಳಿಸುತ್ತದೆ. ಅಧಿಕಾರದ ದುರುಪಯೋಗದಿಂದ ಪ್ರತಿಯೊಂದು ವಿಭಾಗಗಳಲ್ಲಿಯೂ ನಂಬಿಕೆಯೂ ಕುಗ್ಗಿಸುತ್ತದೆ ಅಷ್ಟೇ ಅಲ್ಲ ಭ್ರಷ್ಟಾಚಾರವು ರಾಷ್ಟ್ರದ ಆರ್ಥಿಕ  ಬೆಳವಣಿಗೆಯನ್ನು ತಡೆಯುತ್ತದೆ ಭ್ರಷ್ಟಾಚಾರವು ನೈತಿಕತೆ ಅಥವಾ ಜ್ಞಾನದ ಕೊರತೆಯಿಂದ ಉಂಟಾಗುವುದಿಲ್ಲ ವ್ಯಾಮೋಹದಿಂದ ಭ್ರಷ್ಟಾಚಾರಗಳು ಉಂಟಾಗುತ್ತವೆ. ಭ್ರಷ್ಟಾಚಾರ ಎಂದರೇನು ಭ್ರಷ್ಟಾಚಾರವು ಅಧಿಕಾರದ ಸ್ಥಾನದಲ್ಲಿರುವವರ ಆಕ್ರಮಾಣಿಕ ವರ್ತನೆಯಾಗಿದೆ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವುದು, ವೈಯಕ್ತಿಕ ಲಾಭಕ್ಕಾಗಿ ಒಬ್ಬರು ತಮಗೆ ವಹಿಸಿಕೊಟ್ಟ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಾಗ   ಭ್ರಷ್ಟಾಚಾರವು ಸಂಭವಿಸುತ್ತದೆ.   ಭಾರತದಲ್ಲಿ ಭ್ರಷ್ಟಾಚಾರವು ಕೇಂದ್ರ ರಾಜ್ಯ ಮತ್ತು ಸ್ಥಳೀಯ ಸರ್ಕಾರಿ ಏಜೆನ್ಸಿಗಳ ಆರ್ಥಿಕತೆಯ ಮೇಲೆ ಅನೇಕ ರೀತಿಯಲ್ಲಿ ಪರಿಣಾಮ ಬೀರುವ ಸಮಸ್ಯೆಯಾಗಿದೆ. 2021 ಅಲ್ಲಿ ಅವರ ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕ 180 ರಲ್ಲಿ 85ನೇ ಸ್ಥಾನದಲ್ಲಿ ದೇಶವನ್ನು ಶ್ರೇಣಿಕರಿಸಿದೆ ಅಲ್ಲಿ ಅತ್ಯಂತ ಕಡಿಮೆ ಶ್ರೇಯಾಂಕದ ದೇಶಗಳು ಅತ್ಯಂತ ಪ್ರಾಮಾಣಿಕ ಸಾರ್ವಜನಿಕ ವಲಯವನ್ನು ಹೊಂದಿವೆ. ಭ್ರಷ್ಟ ಭಾರತೀಯ ನಾಗರಿಕನು ಸ್ವಿಸ್ ಬ್ಯಾಂಕ್ ಗಳಲ್ಲಿ ಲಕ...

ಭಾರತದಲ್ಲಿ ಸಲಿಂಗ ವಿವಾಹ: ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಹೇಳಿದ್ದೇನು?

Image
 ಭಾರತದಲ್ಲಿ ಸಲಿಂಗ ವಿವಾಹ: ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಹೇಳಿದ್ದೇನು? ಸಲಿಂಗ ವಿವಾಹಕ್ಕೆ ಕಾನೂನಿನ ಮಾನ್ಯತೆ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ದಂಪತಿಗಳಿಗೆ ಕೇಂದ್ರ ಸರ್ಕಾರ ವಿರೋಧಿಸಿದೆ. ಭಾನುವಾರ ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ ಅಫಿಡವಿಟ್ನಲ್ಲಿ ಕೇಂದ್ರ ಸರ್ಕಾರವು ಪಾಲುದಾರರಾಗಿ ಒಟ್ಟಿಗೆ ವಾಸಿಸುವುದು ಮತ್ತು ಒಂದೇ ಲಿಂಗದ ವ್ಯಕ್ತಿಗಳು ಲೈಂಗಿಕ ಸಂಬಂಧ ಹೊಂದುವುದನ್ನು ಭಾರತೀಯ ಕುಟುಂಬ ವ್ಯವಸ್ಥೆಯ ವಿರೋಧವಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಭಾರತೀಯ ಕುಟುಂಬ ವ್ಯವಸ್ಥೆಯ ಪ್ರಕಾರ ಜೈವಿಕ ಪುರುಷನು 'ಪತಿ'ಯಾಗಿ, ಜೈವಿಕ ಮಹಿಳೆ 'ಹೆಂಡತಿ'ಯಾಗಿ ಮತ್ತು ಇಬ್ಬರ ನಡುವಿನ ಒಕ್ಕೂಟದಿಂದ ಜನಿಸಿದರನ್ನು ಮಕ್ಕಳು ಎಂದು ಸರ್ಕಾರ ಹೇಳಿದೆ.  ಕೇಂದ್ರವು ತನ್ನ ಅಫಿಡವಿಟ್ನಲ್ಲಿ ಸಲಿಂಗ ವ್ಯಕ್ತಿಗಳ ವಿವಾಹದ ನೋಂದಣಿಯು ಅಸ್ತಿತ್ವದಲ್ಲಿರುವ ವೈಯಕ್ತಿಕ ಮತ್ತು ಕ್ರೋಡೀಕರಿಸಿದ ಕಾನೂನು ನಿಬಂಧನೆಗಳಾದ 'ನಿಷೇಧಿತ ಸಂಬಂಧದ ಪದವಿಗಳು', 'ಮದುವೆಯ ಷರತ್ತುಗಳು' ಮತ್ತು 'ವಿಧ್ಧಿಕ ಮತ್ತು ಧಾರ್ಮಿಕ ಅವಶ್ಯಕತೆಗಳು' ಉಲ್ಲಂಘನೆಗೆ ಕಾರಣವಾಗುತ್ತದೆ ಎಂದು ಪ್ರತಿಪಾದಿಸಿದೆ.  ಸಾಮಾಜಿಕ ಸಂಬಂಧದ ನಿರ್ದಿಷ್ಟ ರೂಪವನ್ನು ಗುರುತಿಸಲು ಯಾವುದೇ ಮೂಲಭೂತ ಹಕ್ಕು ಇರುವುದಿಲ್ಲ ಎಂದು ಸರ್ಕಾರ ಒತ್ತಿಹೇಳಿದೆ.  ಭಾರತದಲ್ಲಿ ಸಲಿಂಗ ವಿವಾಹದ ಕಾನೂನು ಸ್ಥಿತಿ: ಭಾರತದಲ್ಲಿ ಮದುವೆಗಳು ಭಿನ್ನಲಿಂಗೀಯ ದಂಪತ...

ಬೆಂಗಳೂರು ಮತ್ತು ಮೈಸೂರು ಹೆದ್ದಾರಿಯಲ್ಲಿ ಟೋಲ್ ಹೆಸರಿನಲ್ಲಿ ಲೂಟಿ

Image
 ಬೆಂಗಳೂರು ಮತ್ತು ಮೈಸೂರು ಹೆದ್ದಾರಿಯಲ್ಲಿ ಟೋಲ್ ಹೆಸರಿನಲ್ಲಿ ಲೂಟಿ ಸಾರ್ವಜನಿಕರಾದ ನಾವು ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಬೇಕಾದರೆ ಟೋಲ್ ಕಟ್ಟಬೇಕು ಎಂಬುದು ಸಾರ್ವಜನಿಕರ ಕರ್ತವ್ಯವೇ ಸರಿ, ಆದರೆ ಈ ಬೆಂಗಳೂರು ಮತ್ತು ಮೈಸೂರು ಹೆದ್ದಾರಿಯಲ್ಲಿ ಬರುವಂಥ ಟೋಲ್ ನಲ್ಲಿ ಮಾತ್ರ ತೆಗೆದುಕೊಳ್ಳಬೇಕಾದ ತೇರಿಗೆಗಿಂತ ದುಪ್ಪಟ್ಟು ಹೆಚ್ಚು ವಸೂಲಿ ಮಾಡುತ್ತಿದ್ದಾರೆ. ಇತರೆ ಟೋಲ್ ಗಳಲ್ಲಿ 150-200 ರೂಪಾಯಿ ತೆಗೆದುಕೊಂಡರೆ, ಈ ಟೋಲ್ ನಲ್ಲಿ ಮಾತ್ರ ಒಂದು ವಾಹನದ ಮೇಲೆ 350 ರಿಂದ 920 ರೂ ವರೆಗೆ ವಸೂಲಿ ಮಾಡುತ್ತಿದ್ದಾರೆ. ಹಾಗಾದರೆ ಒಂದು ವಾಹನಕ್ಕೆ 920 ರಂತೆ ವಸೂಲಿ ಮಾಡುವುದಾದರೆ ಟೋಲ್ ಹೆಸರಲ್ಲಿ ಸರ್ಕಾರ ತನ್ನ ಬೊಕ್ಕಸವನ್ನು ತುಂಬಿಸಿಕೊಳ್ಳುತ್ತಿದೆ. ಹಾಗಾದರೆ ಟ್ಯಾಕ್ಸ್ ಹೆಸರಲ್ಲಿ ಸರ್ಕಾರ ಸಾರ್ವಜನಿಕರಿಂದ ಹಣವನ್ನು ವಸೂಲಿ ಮಾಡುವುದಾದರೆ ದಿನ ನಿತ್ಯದ ಕೆಲಸಕ್ಕಾಗಿ ಬೆಂಗಳೂರಿನಿಂದ ಮೈಸೂರಿಗೆ ಹೊಡಾಡುವ ಸಾಮಾನ್ಯ ಜನರ ಕಷ್ಟವನ್ನು ಯಾರ ಬಳಿಯಲ್ಲಿ ಕೇಳಬೇಕು.

ಚುನಾವಣೆ ವ್ಯಾಪಾರ ಅಲ್ಲ- ನನ್ನ ಮತ ಮಾರಾಟಕ್ಕಿಲ್ಲ

Image
 ಚುನಾವಣೆ ವ್ಯಾಪಾರ ಅಲ್ಲ- ನನ್ನ ಮತ ಮಾರಾಟಕ್ಕಿಲ್ಲ  ನಮ್ಮ ತೋರು ಬೆರಳಿನಲ್ಲಿದೆ ಸ್ವಾಭಿಮಾನದ ಹೋರಾಟ:-  ಮತಗಳನ್ನು ಮಾರಾಟ ಮಾಡಿಕೊಳ್ಳುವುದು ಸಂವಿಧಾನಕ್ಕೆ ಮಾಡುವ ದೊಡ್ಡಅಪಚಾರ. ಮತದಾರನಿಗೆ ಚುನಾವಣೆ ಎನ್ನುವುದು ದೇವರ ಪೂಜೆ ಇದ್ದಂತೆ ಇಲ್ಲಿ ವಿಘ್ನವಾದರೆ ಮುಂದಿನ ಐದು ವರ್ಷಗಳ ಕಾಲ ನರಕ ಅನುಭವಿಸಬೇಕಾಗುತ್ತದೆ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಇಂದು ತೀರ ಗಂಭೀರ ಹಂತವೊಂದನ್ನು ತಲುಪಿದೆ.ಬಡವರ ಹಾಗೂ ಸಮಾಜದಿಂದ ನಿರ್ಲಕ್ಷ ಕ್ಕೋಳಗಾದವರ ಹಕ್ಕುಗಳು ಹಾಗೂ ಅರ್ಹತೆಗಳು ಸಾರಸಗಟಾಗಿ ಅಸಡ್ಡೆಗೊಳ್ಳುತ್ತಿವೆ. ಅಲ್ಲದೆ ಅದನ್ನು ವ್ಯವಸ್ಥಿತವಾಗಿ ಉಲ್ಲಂಘಿಸಲಾಗುತ್ತಿದೆ. ಚುನಾಯಿತ ಪ್ರತಿನಿಧಿಗಳು ಜನಪ್ರತಿನಿಧಿಗಳoತಲ್ಲ ಅವರೇ ಜನನಾಯಕರಂತೆ ವರ್ತಿಸುತ್ತಿದ್ದಾರೆ.  ಸರಕಾರ ತಪ್ಪಿದ್ದರೆ ಪ್ರಶ್ನಿಸುವ ಹಕ್ಕನ್ನು ಸಂವಿಧಾನ ನಮಗೆ ನೀಡಿದೆ.ಆದರೆ ನಮ್ಮ ಮತವನ್ನು ಮಾರಿಕೊಂಡಿದ್ದರೆ ನಮಗೆ ಸರ್ಕಾರವನ್ನು ಪ್ರಶ್ನಿಸುವ ನೈತಿಕತೆ ಇರುವುದಿಲ್ಲ. ಹಳ್ಳಿಗಳಲ್ಲಿ ಹಾಗೂ ಹಿಂದುಳಿದ ನಗರ ಪ್ರದೇಶಗಳಲ್ಲಿ ಇದು ಕಣ್ಣು ಕೊರೈಸುವ ಸತ್ಯವಾಗಿದೆ.ಇಂತಹ ವಿಲಕ್ಷಣ ಸನ್ನಿವೇಶದಲ್ಲಿ ಮಹತ್ವದ ಆಶಾಕಿರಣವಾಗಿ ಕಾಣಿಸುವುದೇ ನನ್ನ ಮತ ಮಾರಾಟಕ್ಕಿಲ್ಲ ಎನ್ನುವ ಆಂದೋಲನ . ("My vote not for sale ").  ಪಾರದರ್ಶಕ ನ್ಯಾಯಯುತ ಹಾಗೂ ಭ್ರಷ್ಟಾಚಾರದ ಸೋಂಕೆ ಇಲ್ಲದ ಚುನಾವಣಾ ಪ್ರಕ್ರಿಯೆಗೆ ಅವಕಾಶವಿರಬೇಕೆಂಬುದೇ ಈ ಆಂದೋಲನದ ಮೂಲ ಆಗ್ರಹ. ಇ...

`ಸೃಷ್ಟಿ ಮೀಡಿಯಾ ಅಕಾಡೆಮಿ'

Image
  ` ಸೃಷ್ಟಿ ಮೀಡಿಯಾ ಅಕಾಡೆಮಿ ' ಸೃಷ್ಟಿ ಫೌಂಡೇಷನ್ ಸಂಸ್ಥೆಯ ಕನಸಿನ ಕೂಸು . ಮಾಧ್ಯಮ ಲೋಕದಲ್ಲಿ ಹೊಸತನ ಮೂಡಿಸಬೇಕು . ಕನ್ನಡ ಪತ್ರಿಕೋದ್ಯಮಕ್ಕೆ ಕೌಶಲ್ಯ ಭರಿತ , ವೃತ್ತಿಪರ , ಪ್ರಾಮಾಣಿಕ ಪತ್ರಕರ್ತರನ್ನು ಕೊಡುಗೆಯಾಗಿ ನೀಡಬೇಕು ಅನ್ನೋ ಘನ ಉದ್ದೇಶದಿಂದ ಈ ಸಂಸ್ಥೆಯನ್ನು ಸ್ಥಾಪಿಸಲಾಗಿದೆ . ಜನರಲ್ಲಿ ಪತ್ರಿಕೋದ್ಯಮದ ಬಗ್ಗೆ ವಿಶ್ವಾಸಾರ್ಹತೆ ಹೆಚ್ಚಿಸಬೇಕು ಅನ್ನೋ ಏಕೈಕ ಉದ್ದೇಶದಿಂದ ಕನ್ನಡ ಪತ್ರಿಕೋದ್ಯಮದಲ್ಲಿ ಹೊಸ ಮೈಲಿಗಲ್ಲನ್ನೇ ಸ್ಥಾಪಿಸಿ , ತನಿಖಾ ಪತ್ರಿಕೋದ್ಯಮದಲ್ಲಿ ತಮ್ಮದೇ ಛಾಪು ಮೂಡಿಸಿ , ರಾಷ್ಟ್ರೀಯ ಹಾಗೂ   ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿಯನ್ನು ಗಳಿಸಿರುವ ಶ್ರೀಮತಿ ವಿಜಯಲಕ್ಷ್ಮಿ ಶಿಬರೂರು ಅವರ ನೇತೃತ್ವದಲ್ಲಿ ಸೃಷ್ಟಿ ಮೀಡಿಯಾ ಅಕಾಡೆಮಿ ನಡೆಯನ್ನು ಆರಂಭಿಸಲಾಗಿದೆ . ಶಿಬರೂರು ಅವರ ಜೊತೆ ಕನ್ನಡ ಮಾತ್ರವಲ್ಲ ಆಂಗ್ಲ ಮಾಧ್ಯಮದ ದಿಗ್ಗಜರೂ ಕೈಜೋಡಿಸಿ ತಮ್ಮ ಅನುಭವಾಮೃತವನ್ನು ವಿದ್ಯಾರ್ಥಿಗಳಿಗೆ ಧಾರೆ ಎರೆಯುತ್ತಿದ್ದಾರೆ .      ಮಾಧ್ಯಮಕ್ಕೆ ಹೊಸತನದ ಜೊತೆಗೆ ಬದಲಾವಣೆ ತರುವುದೇ ನಮ್ಮ ಗುರಿ :  ಮಾಧ್ಯಮ ಕ್ಷೇತ್ರ ರಾಕೆಟ್ ವೇಗದಲ್ಲಿ ಬೆಳೆಯುತ್ತಿದೆ . ಈ ಡಿಜಿಟಲ್ ಯುಗದಲ್ಲಿ ಹೊಸ ಹೊಸ ತಂತ್ರಜ್ಞಾನಗಳು ಆವಿಷ್ಕಾರಗೊಳ್ಳುತ್ತಿವೆ . ಒಂದು ತಂತ್ರಜ್ಞಾನ ಕಲಿಯೋದಕ್ಕೆ ಮುನ್ನವೇ ...